ಮುಂಬೈ : ಸುಮಾರು ಒಂದು ದಶಕದಿಂದ ಬಾಲಿವುಡ್‌ನ ಅಗ್ರ ನಾಯಕಿಯಾಗಿ ರಾರಾಜಿಸಿದ ನಟಿ ಕತ್ರಿನಾ ಕೈಫ್ ಅವರು ಉತ್ತಮ ನಟಿ, ಅದ್ಭುತ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ವಯಸ್ಸಿಗೆ ತಕ್ಕಂತೆ ಕತ್ರಿನಾಳ ಗ್ಲಾಮರ್ ಕೂಡ ಹೆಚ್ಚುತ್ತಿದ್ದು, ಯುವಕರ ಕನಸಿನ ರಾಣಿಯಾಗಿ ಮೆರೆಯುತ್ತಿದ್ದಾರೆ. ಇತ್ತೀಚೆಗೆ ಕತ್ರಿನಾ ಕೈಫ್ ಅವರು ಒಂದು ಜನಪ್ರಿಯ ಮ್ಯಾಗಜಿನ್ ಫೋಟೋ ಶೂಟ್‌ನಲ್ಲಿ ಭಾಗವಹಿಸಿದ್ದರು.
ನಟಿ ಕತ್ರಿನಾ ಕೈಫ್ ಅವರು ಸಮುದ್ರದ ದಡದಲ್ಲಿ ಕೆಂಪು ಹಾಟ್ ಬಟ್ಟೆ ಧರಿಸಿ ಜನಪ್ರಿಯ “ಪಿಕಾಕ್ ಮ್ಯಾಗಜಿನ್” ಮುಖಪುಟಕ್ಕೆ ಐಕಾನಿಕ್ ಲುಕ್ ನಲ್ಲಿ ಪೋಸ್ ನೀಡಿದ್ದಾರೆ. ಕತ್ರಿನಾ ಅವರು ಈ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಕತ್ರಿನಾ ಅವರ ಲುಕ್ ಗೆ `ರೆಡ್ ಹಾಟ್ ಬ್ಯೂಟಿ` ಎಂದು ನೆಟಿಜನ್‌ಗಳು ಪ್ರತಿಕ್ರಿಯಿಸುತ್ತಿದ್ದಾರೆ.
View this post on Instagram