ವಂಚಕ ಸುಕೇಶ್ ಚಂದ್ರಶೇಖರ್ಗೆ ಸಂಬಂಧಿಸಿದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಇತ್ತೀಚಿಗೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗದ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು.
ಹೌದು, ವಂಚಕ ಸುಕೇಶ್ ಜತೆಗಿನ ಸ್ನೇಹವೇ ನಟಿ ಜಾಕ್ವೆಲಿನ್ಗೆ ಮುಳುವಾಗಿದೆ. ಸುಕೇಶ್‌ನಿಂದ ಪರ್ಷಿಯನ್ ಬೆಕ್ಕು, ಕುದುರೆ ಮುಂತಾದ ದುಬಾರಿ ಉಡುಗೊರೆ ಪಡೆದಿದ್ದ ನಟಿ ಜಾಕ್ವೆಲಿನ್ ಬಗ್ಗೆ ಮತ್ತೊಂದು ಸ್ಫೋಟ ಸುದ್ದಿ ಹೊರ ಬಿದ್ದಿದೆ.
ಈಗ ನಟಿ ಜಾಕ್ವೆಲಿನ್ ರಹಸ್ಯವೊಂದನ್ನು ರಿವೀಲ್ ಮಾಡಿದ್ದು, ‘ಸುಕೇಶ್ ನನ್ನ ಕನಸಿನ ವ್ಯಕ್ತಿಯಾಗಿದ್ದ. ನಾನು ಅವನನ್ನು ಮದುವೆಯಾಗಲು ಬಯಸಿದ್ದೆ’ ಎಂದು ಹೇಳಿದ್ದು, ವಂಚಕ ಸುಕೇಶ್ ಚಂದ್ರಶೇಖರ್ ಅನ್ನು ಮದುವೆಯಾಗಲು ಕೂಡ ಸಿದ್ಧರಾಗಿದ್ದರು ಎಂಬ ಮಾಹಿತಿ ಬಯಲಾಗಿದೆ. ಸುಕೇಶ್ ನಟಿ ಜಾಕ್ವೆಲಿನ್, ನೊರಾ ಫತೇಹಿ ಸೇರಿದಂತೆ ಹಲವು ಚೆಂದುಳ್ಳಿ ಚೆಲುವೆಯರಿಗೆ ದುಬಾರಿ ಉಡುಗೊರೆಗಳನ್ನು ಕೊಟ್ಟು ತನ್ನ ಬಲೆಗೆ ಬೀಳಿಸಿಕೊಂಡಿದ್ದ.
ನಟಿ ಜಾಕ್ವೆಲಿನ್ ಕುಟುಂಬದವರಿಗೂ ಸುಕೇಶ್ ಉಡುಗೊರೆ ನೀಡಿದ್ದ ಎನ್ನಲಾಗಿದೆ. ಜಾಕ್ವೆಲಿನ್ ಹೆಸರು ಚಾರ್ಜ್ಶೀಟ್ನಲ್ಲಿದ್ದು, ಸದ್ಯಕ್ಕೆ ಅವರು ಈ ಸಮಸ್ಯೆಯಿಂದ ಹೊರಬರುವ ಸಾಧ್ಯತೆ ಕಡಿಮೆ.