Actress Girija Oak । ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಗಿರಿಜಾ ಓಕ್ (Girija Oak) ಅವರು ಸೀರೆಯುಟ್ಟು ನೀಡಿದ ಸಂದರ್ಶನವು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ.

ಹೌದು, ನಟಿ ಗಿರಿಜಾ ಓಕ್ರವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ನಲ್ಲಿದ್ದು, ಎಐ (AI) ಬಳಸಿ ಮಾಡಿದ ಅವರ ಅಶ್ಲೀಲ ಫೋಟೋಗಳು ವೈರಲ್ ಆಗಿವೆ. ಈ ಬಗ್ಗೆ ನಟಿ ಗಿರಿಜಾ ಅವರು ನೆಟ್ಟಿಗರಲ್ಲಿ ಮನವಿ ಮಾಡಿದ್ದು, ‘ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ವಿಷಯಗಳು ಮನಸ್ಸಿಗೆ ಮುದ ನೀಡುತ್ತವೆ. ನನಗೆ ತುಂಬಾ ಒಳ್ಳೆಯ ಕಾಮೆಂಟ್‌ಗಳು ಮತ್ತು ಸಂದೇಶಗಳು ಬರುತ್ತಿವೆ. ಆದರೆ ಕೆಲವು ಫೋಟೋಗಳು ಅಶ್ಲೀಲವಾಗಿವೆ. ಅವುಗಳನ್ನು AI ಬಳಸಿ ಮಾಡಲಾಗಿದೆ.
ಆದರೆ, ನನಗೆ 12 ವರ್ಷದ ಮಗನಿದ್ದಾನೆ. ಭವಿಷ್ಯದಲ್ಲಿ ಅವನು ನನ್ನ ಅಂತಹ ಎಡಿಟೆಡ್ ಫೋಟೋ ನೋಡಿದರೆ? ಅವನ ಭವಿಷ್ಯ ನೆನೆದು ನನಗೆ ಭಯವಾಗುತ್ತಿದೆ” ಎಂದು ನಟಿ ಗಿರಿಜಾ ಓಕ್ ಹೇಳಿದ್ದಾರೆ.




