ಬೆಂಗಳೂರು: ಇನ್ಮುಂದೆ ಸ್ಟಾರ್‌ವಾರ್, ಫ್ಯಾನ್‌ವಾರ್ ಬೇಡ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ನಟ ನವರಸ ನಾಯಕ ಜಗ್ಗೇಶ್ ಅವರು ಇದನ್ನು ನೋಡಿ ಹಾಲುಜೇನು ಸವಿದಂತೆ ಆಯಿತು ಎಂದು ಟ್ವೀಟ್ ಮಾಡಿದ್ದಾರೆ.
ಹೌದು, ಈ ಬಗ್ಗೆ ನಟ ಜಗ್ಗೇಶ್ ಟ್ವೀಟ್ ಮಾಡಿದ್ದು, ‘ಎಲ್ಲ ತಾರೆಯರು ಒಂದಾಗಿರುವ ಚಿತ್ರಗಳನ್ನು ಹಂಚಿಕೊಂಡು, ಈ ಭಾವ ನನ್ನ ಕಣ್ಣಲ್ಲಿ ಆನಂದಬಾಷ್ಪ ತರಿಸಿತು ಎಂದು ಬರೆದುಕೊಂಡಿದ್ದು, ನಾವೆಲ್ಲಾ ಶಾರದೆಯ ಮಕ್ಕಳು ಚಿತ್ರರಂಗ ನಮ್ಮ ಮನೆ! ಕನ್ನಡಿಗರು ನಮ್ಮ ಬಂಧುಗಳು! ನಮ್ಮ ಈ ಒಗ್ಗಟ್ಟು ಡಾ।। ರಾಜ್ ಕುಮಾರ್ ಕಾಲದಲ್ಲಿ ಇತ್ತು.
ಈಗ ಇನ್ಮುಂದೆ ಸ್ಟಾರ್‌ವಾರ್, ಫ್ಯಾನ್‌ವಾರ್ ಬೇಡ ಎಂಬ ಸಂದೇಶಗಳನ್ನು ನೋಡಿ ಹಾಲುಜೇನು ಸವಿದಂತೆ ಆಯಿತು’ ಎಂದು ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಈ ಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೆ ಮುಂದುವರಿಯಲಿ love all ಎಂದು ಟ್ವೀಟ್ ಮಾಡಿದ್ದಾರೆ
ಈಭಾವ ನನ್ನಕಣ್ಣಲ್ಲಿ ಆನಂದಭಾಷ್ಪ ತರಿಸಿತು!
ಮಾನ್ಯರೆ ನಾವೆಲ್ಲಾ ಶಾರದೆಯ ಮಕ್ಕಳು ಚಿತ್ರರಂಗ ನಮ್ಮ ಮನೆ!
ಕನ್ನಡಿಗರು ನಮ್ಮ ಬಂಧುಗಳು!
ನಮ್ಮ ಈಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು!ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು!ಈಗ ಇದನ್ನ ನೋಡಿ ಹಾಲುಜೇನು ಸವಿದಂತೆ ಆಯಿತು!ಈಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೆ ಮುಂದುವರಿಯಲಿlove all pic.twitter.com/FC4WM7wQ0r— ನವರಸನಾಯಕ ಜಗ್ಗೇಶ್ (@Jaggesh2) November 2, 2021