Actor Allu Arjun Arrested : ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ. ಹೈದರಾಬಾದ್‌ನ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಟಾಸ್ಕ್ ಫೋರ್ಸ್ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ ಬಂಧಿಸಿದ್ದಾರೆ.
ಹೌದು, ಪುಷ್ಪ 2 ಚಿತ್ರದ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದರು. ಆಕೆಯ ಮಗ ಗಂಭೀರವಾಗಿ ಗಾಯಗೊಂಡಿದ್ದನು.
ಅಲ್ಲು ಅರ್ಜುನ್ ಅರೆಸ್ಟ್.. EXCLUSIVE ಮಾಹಿತಿ
ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರ ಬಂಧನ ಸಂಚಲನಕ್ಕೆ ಕಾರಣವಾಗಿದೆ. ಕಾಫಿ ಹೀರುತ್ತಾ ಮನೆಯ ಬಳಿ ನಿಂತಿದ್ದಾಗ ಕೆಳಗೆ ಬಂದಾಗ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ.
ಈ ವೇಳೆ ಅಲ್ಲು ಅರವಿಂದ್ ಕೂಡ ಒಟ್ಟಿಗೆ ಹೋಗಲು ಮುಂದಾದಾಗ.. ಪೊಲೀಸರು ಬೇಡ ಎಂದರು. ಆತಂಕಗೊಂಡ ಪತ್ನಿ ಸ್ನೇಹಾ ರೆಡ್ಡಿ ಅವರಿಗೆ ಧೈರ್ಯ ತುಂಬಿ ಅಲ್ಲು ಅರ್ಜುನ್ ಪೊಲೀಸ್ ವಾಹನದಲ್ಲಿ ತೆರಳಿದರು.
ಅಲ್ಲು ಅರ್ಜುನ್ ಬೆಡ್‌ರೂಮ್‌ಗೆ ನುಗ್ಗಿ ಬಂಧನ
ತನ್ನನ್ನು ಬಂಧಿಸಲು ಮನೆಗೆ ಬಂದ ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸರ ವಿರುದ್ಧ ಹೀರೋ ಅಲ್ಲು ಅರ್ಜುನ್ ಆಕ್ಷೇಪ ವ್ಯಕ್ತಪಡಿಸಿದರು. ಡ್ರೆಸ್ ಬದಲಾಯಿಸಲೂ ಪೊಲೀಸರು ಅವಕಾಶ ನೀಡಿಲ್ಲ. ಉಪಾಹಾರ ಸೇವಿಸಿ ಬರ್ತೀನಿ ಅಂತ ಅಲ್ಲು ಅರ್ಜುನ್ ಎಂದರೂ ಪೊಲೀಸರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಪೊಲೀಸರು ನೇರವಾಗಿ ಬೆಡ್‌ರೂಮ್‌ಗೆ ನುಗ್ಗಿ ಅಲ್ಲು ಅರ್ಜುನ್ ಅವರನ್ನು ಬಂಧಿಸಿದರು. ಈ ವಾಗ್ವಾದದ ವಿಡಿಯೋ ವೈರಲ್ ಆಗಿದೆ. ಇದೀಗ ಅವರನ್ನು ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಲಾಗಿದೆ.
ಆರೋಪ ಸಾಬೀತಾದ್ರೆ ಅಲ್ಲು ಅರ್ಜುನ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆ?
ಹೈದರಾಬಾದ್‌ನ ಥಿಯೇಟರ್ ಕಾಲ್ತುಳಿತ ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣ ಸಂಬಂಧ ಪೊಲೀಸರು ಅಲ್ಲು ಅರ್ಜುನ್ ವಿರುದ್ಧ 105, 118(1), r/w 3(5) BNS ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದು, ಸ್ವಲ್ಪ ಸಮಯದ ಹಿಂದಷ್ಟೇ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣ ಸಾಬೀತಾದರೆ ಅಲ್ಲು ಅರ್ಜುನ್ ಸುಮಾರು 10 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಕಾನೂನು ತಜ್ಞರು. ಈ ಪ್ರಕರಣದಲ್ಲಿ ಥಿಯೇಟರ್ ಮಾಲೀಕರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಕಣ್ಣೀರು ಹಾಕಿದ ಪತ್ನಿಗೆ ಮುತ್ತುಕೊಟ್ಟು ಧೈರ್ಯ ತುಂಬಿದ ಅಲ್ಲು ಅರ್ಜುನ್
‘ಪುಷ್ಪ-2’ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದ ಅಲ್ಲು ಕುಟುಂಬಕ್ಕೆ ದಿಢೀರ್ ಶಾಕ್ ಆಗಿದೆ. ಪೊಲೀಸರು ಮನೆಗೆ ಬಂದಾಗ ಏನಾಗುತ್ತಿದೆ ಎಂಬ ಗೊಂದಲಕ್ಕೆ ಅವರ ಕುಟುಂಬ ಸದಸ್ಯರು ಸಿಲುಕಿದ್ದರು. ಮಹಿಳೆ ಸಾವಿಗೆ ಕಾರಣರಾಗಿದ್ದಕ್ಕೆ ಅವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದ ಪತ್ನಿ ಸ್ನೇಹಾ ರೆಡ್ಡಿ ದಿಢೀರ್ ಗಾಬರಿಗೊಂಡರು. ಪತ್ನಿಯ ಕೆನ್ನೆಗೆ ಮುತ್ತಿಟ್ಟ ಅಲ್ಲು ಅರ್ಜುನ್ ಪೊಲೀಸರ ಜೊತೆ ಪೊಲೀಸ್ ಠಾಣೆಗೆ ತೆರಳಿದರು.
ಕೆಲವೇ ಕ್ಷಣಗಳಲ್ಲಿ ನಾಂಪಲ್ಲಿ ಕೋರ್ಟ್‌ಗೆ ಅಲ್ಲು ಅರ್ಜುನ್..
ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್‌ನ ನಾಂಪಲ್ಲಿ ಕೋರ್ಟ್‌ಗೆ ಕೆಲವೇ ಕ್ಷಣಗಳಲ್ಲಿ ಪೊಲೀಸರು ಹಾಜರುಪಡಿಸಲಿದ್ದಾರೆ. ನಟನನ್ನು ವಶಕ್ಕೆ ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಮನವಿ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದೀಗ ಅವರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದೇ ವೇಳೆ, ಎಫ್‌ಐಆರ್ ರದ್ದು ಕೋರಿ ಅಲ್ಲು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇನ್ನು ಸ್ವಲ್ಪ ಹೊತ್ತಿನಲ್ಲೇ ವಿಚಾರಣೆಗೆ ಬರಲಿದೆ.