ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ ಪರ್ವ’ ಕಾರ್ಯಕ್ರಮ ಹಿನ್ನೆಲೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಪ್ಪು ನಟಿಸಿರುವ ಕಡೆಯ ಸಿನಿಮಾ ‘ಗಂಧದ ಗುಡಿ’ ಪ್ರೀ ರಿಲೀಸ್ ಈವೆಂಟ್ ಪುನೀತ್ ಪರ್ವಗೆ ವೇದಿಕೆ ಸಜ್ಜಾಗಿದೆ.
ನಟ ಪುನೀತ್ ರಾಜ್ ಕುಮಾರ್ ಕಳೆದುಕೊಂಡು ಅಕ್ಟೋಬರ್ 29ಕ್ಕೆ ಒಂದು ವರ್ಷ ತುಂಬುತ್ತಿದೆ. ಸಂಜೆ ಅರಮನೆ ಮೈದಾನದಲ್ಲಿ 5 ಎಕರೆಯ ಕೃಷ್ಣ ವಿಹಾರದಲ್ಲಿ ಪುನೀತ ಪರ್ವ ಆರಂಭವಾಗಲಿದ್ದು, ದಕ್ಷಿಣ ಭಾರತದ ಬಣ್ಣದ ಲೋಕವೇ ಸಮ್ಮಿಲನವಾಗುತ್ತಿದ್ದು, 5 ಎಕರೆ ಜಾಗದಲ್ಲಿ 40 ಸಾವಿರ ಅಭಿಮಾನಿಗಳು ಭಾಗಿಯಾಗುವ ಸಾಧ್ಯತೆ ಇದೆ.
‘ಪುನೀತ ಪರ್ವ’ಕ್ಕೆ ಸ್ಟಾರ್ ನಟರ ದಂಡು:
ಅರಮನೆ ಮೈದಾನದಲ್ಲಿ ನಡೆಯಲಿರುವ ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಸ್ಟಾರ್ ನಟರ ದಂಡೇ ಆಗಮಿಸಲಿದೆ. ಹೌದು ಈ ಕಾರ್ಯಕ್ರಮಕ್ಕೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ತಮಿಳು ಸಿನಿರಂಗದ ಕಮಲ್ ಹಾಸನ್, ಪ್ರಭುದೇವ, ಸೂರ್ಯ, ತೆಲುಗು ನಟರಾದ ರಾಣಾ ದಗ್ಗುಬಾಟಿ, ನಂದಮೂರಿ ಬಾಲಕೃಷ್ಣ, ಕನ್ನಡದಿಂದ ಸುದೀಪ್, ಯಶ್, ರಮ್ಯಾ, ರವಿಚಂದ್ರನ್, ಜಗ್ಗೇಶ್ ,ರಮೇಶ್ ಅರವಿಂದ್, ಗಣೇಶ್, ಉಪೇಂದ್ರ ಸೇರಿದಂತೆ ಕನ್ನಡದ ಬಹುತೇಕ ಎಲ್ಲಾ ನಟ, ನಟಿಯರು ಇರಲಿದ್ದಾರೆ.
ಇನ್ನು, ಅರಮನೆ ಮೈದಾನದಲ್ಲಿ ನಡೆಯಲಿರುವ ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಕುನಾಲ್ ಗಾಂಜಾವಾಲ, ಅರ್ಮಾನ್ ಮಲಿಕ್ ಗಾನಸುಧೆ, ಪ್ರಭುದೇವ & ನಟಿ ರಮ್ಯಾ ನೃತ್ಯ ಪ್ರದರ್ಶನವಿರಲಿದೆ.