ದಾವಣಗೆರೆ ಫೆ.26: ಮಾನ್ಯ ಕಂದಾಯ ಸಚಿವರಾದ ಆರ್ ಅಶೋಕ ಇವರು ಫೆಬ್ರವರಿ-2022ರ ಮಾಹೆಯ ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಫೆ.28 ರಂದು ಬೆಳ್ಳಿಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12 ಗಂಟೆಗೆ ಹೊನ್ನಾಳಿಗೆ ಆಗಮಿಸಿ ನಂತರ ಹೊನ್ನಾಳಿ ನೂತನ ಕಂದಾಯ ಉಪವಿಭಾಗದ ಉಪವಿಭಾಗಾಧಿಕಾರಿಗಳ ಕಚೇರಿ ಉದ್ಘಾಟನಾ ಸಮಾರಂಭ ಹಾಗೂ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 2 ಗಂಟೆಗೆ ಹೊನ್ನಾಳಿಯ ಕುಂಚಿಟಿಗ ಸಮುದಾಯ ಭವನದ ಭೂಮಿ ಪೂಜೆಯನ್ನು ನೆರೆವೇರಿಸುವರು. ನಂತರ 3 ಗಂಟೆಗೆ ಹೊನ್ನಾಳಿಯಿಂದ ಹೊರಟು ಬೆಂಗಳೂರಿಗೆ ತೆರುಳುವರೆಂದು ಸಚಿವರ ಅಪ್ತ ಕಾರ್ಯದರ್ಶಿ ಡಾ.ಆರ್ ಪ್ರಶಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.