ಕೊಲ್ಕತ್ತಾ : ಭಾರತ- ವೆಸ್ಟ್ ಇಂಡಿಸ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 8 ರನ್ ಗಳ ರೋಚಕ ಗೆಲುವು ದಾಖಲಿಸಿದ್ದು, ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ ಸಾಧಿಸಿದೆ.
ಟೀಮ್ ಇಂಡಿಯಾ ನೀಡಿದ 187 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 178 ರನ್‌ಗಳಿಸುವ ಮೂಲಕ 8 ಗಳಿಂದ ಸೋಲು ಅನುಭವಿಸಿತು. ಇನ್ನು, ಇಂಡೀಸ್ ಪರ ಆರಂಭಿಕ ಆಟಗಾರ ಬ್ರೇಡನ್ ಕಿಂಗ್ 22, ನಿಕೊಲಸ್ ಪೂರನ್ 62, ರಾವ್ಮನ್ ಪೋವೆಲ್ 68 ರನ್‌ಗಳಿಸಿದರು. ಟೀಮ್ ಇಂಡಿಯಾ ಪರ ಭುವನೇಶ್ವರ್ ಕುಮಾರ್, ಚಾಹಲ್, ರವಿ ಬಿಶನೋಯ್ ತಲಾ 1 ವಿಕೆಟ್ ಪಡೆದರು.
ಇನ್ನು, ಇದಕ್ಕೂ ಮುಂಚೆ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್‌ಗಳಿಸಿತು. ಟೀಮ್ ಇಂಡಿಯಾ ಪರ ನಾಯಕ ಶರ್ಮಾ 19, ವಿರಾಟ್ ಕೊಹ್ಲಿ 52, ರಿಷಬ್ ಪಂತ್ 52, ವೆಂಕಟೇಶ್ ಅಯ್ಯರ್ 33 ರನ್ ಗಳಿಸಿದರೆ ಇಂಡೀಸ್ ಪರ ರೆಸ್ಟೋನ್ ಚೇಸ್ 3, ಕಾಟ್ರೆಲ್ & ಶೇಫಾರ್ಡ್ ತಲಾ 1 ವಿಕೆಟ್ ಪಡೆದರು.
ಭಾರತ ಪರ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಗೆಲುವಿಗೆ ಕಾರಣರಾದ ರಿಷಬ್ ಪಂತ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.