ದಾವಣಗೆರೆ ಫೆ.15 :ದಾವಣಗೆರೆ ನಗರ ಉಪವಿಭಾಗ-1 66/11ಕೆ.ವಿ. ವಿತರಣಾ ಕೇಂದ್ರ ದಾವಣಗೆರೆಯಿಂದ ಹೊರಡುವ 11ಕೆ.ವಿ. ಬಸವೇಶ್ವರ ಎಫ್12 ಫೀಡರ್ನಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಬಂಧಿಸಿದ ಕಾಮಗಾರಿ ಮತ್ತು 24*7 ಜಲಸಿರಿ ಯೋಜನೆಯಡಿ ನಿರಂತರ ಶುದ್ದ ಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಫೆ.16 ರಂದು ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಲಿದೆ.
ಎಸ್.ಎಸ್. ಲೇಔಟ್ ಎ ಬ್ಲಾಕ್ ಮತ್ತು ಬಿ ಬ್ಲಾಕ್ ಬಸವೇಶ್ವರ ಬಡಾವಣೆ, ಶಾಂತಿನಗರ, ಮಹಾಲಕ್ಷ್ಮೀ ಲೇಔಟ್, ಬಾಲಾಜಿ ನಗರ, ನಿಜಲಿಂಗಪ್ಪ ಲೇಔಟ್, ನೌಕರರ ಸಮುದಾಯ ಭವನ, ಅಥಣಿ ಕಾಲೇಜ್, ಎಮ್ಬಿಎ ಕಾಲೇಜ್, ಆಫೀಸರ್ ಕ್ಲಬ್, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.