ಕೋಲಾರ: ತನ್ನದೇ ಮದುವೆಯ ಆರತಕ್ಷತೆ ನಡೆಯುವ ವೇಳೆ ಮದುಮಗಳೊಬ್ಬಳು ಕುಸಿದು ಬಿದ್ದು ಅಸ್ವಸ್ಥಳಾದ ಘಟನೆ ಕೋಲಾರದ ಶ್ರೀನಿವಾಸಪುರದಲ್ಲಿ ನಡೆದಿದೆ.
ಚೈತ್ರಾ (26) ಅಸ್ವಸ್ಥಳಾದ ಮದುಮಗಲಾಗಿದ್ದು, ಕೋಲಾರದ ಶ್ರೀನಿವಾಸಪುರ ನಿವಾಸಿಯಾಗಿದ್ದ ಆಕೆ ಆರಕ್ಷಣತೆ ವೇಳೆ ಕುಸಿದು ಬಿದ್ದಿದ್ದಳು. ಕುಸಿದುಬಿದ್ದ ತಕ್ಷಣ ಚೈತ್ರಾಳನ್ನು ಆಸ್ಪತ್ರೆಗೆ ದಾಖಲಿಸಲಾದರೂ ವೈದ್ಯರು ಆಕೆಯ ಬ್ರೈನ್ ಡೆಡ್ ಆಗಿದ್ದು, ಬದುಕುಳಿಯುವುದು ಅಸಾಧ್ಯ ಎಂದು ವೈದ್ಯರು ಆಕೆಯ ಪೋಷಕರಿಗೆ ತಿಳಿಸಿದ್ದಾರೆ.
ಇತ್ತ ಮದುವೆಯಾಗಿ ಗಂಡನ ಮನೆಗೆ ಹೋಗಬೇಕಿದ್ದ ತಮ್ಮ ಮಗಳ ಕಂಡು ಪೋಷಕರ ರೋದನೆ ಮುಗಿಲು ಮುಟ್ಟಿತು. ಇಂತಹ ಹೃದಯವಿದ್ರಾವಕ ದುರಂತದ ನಡುವೆಯೂ ಚೈತ್ರಾಳ ಪೋಷಕರು ತಮ್ಮ ಮುದ್ದು ಮಗಳ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿ ಮನಕಲಕುವ ಘಟನೆಯನ್ನು ಹಂಚಿಕೊಂಡಿದ್ದಾರೆ.