ಹೈದರಾಬಾದ್ : ಹೈದರಾಬಾದಿನಲ್ಲಿ ನಿರ್ಮಿಸಲಾದ 216 ಅಡಿ ಎತ್ತರದ ವಿಶ್ವದ 2ನೇ ಅತಿದೊಡ್ಡ ರಾಮಾನುಜಾಚಾರ್ಯರ ಸಮಾನತೆ ಪ್ರತಿಮೆಯನ್ನು ಪ್ರಧಾನಿ ಮೋದಿ ಇಂದು ಅನಾವರಣ ಮಾಡಲಿದ್ದಾರೆ.
ದಕ್ಷಿಣ ಭಾರತದ ಸಮಾಜ ಸುಧಾರಕರಲ್ಲಿ ಅತ್ಯಂತ ಪ್ರಮುಖರೆನಿಸಿದ 11ನೆ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರ ಪ್ರತಿಮೆಯನ್ನು ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ, ಸತು ಈ ಪಂಚಲೋಹಗಳಿಂದ ನಿರ್ಮಿಸಲಾಗಿದೆ.
120ವರ್ಷ ಬದುಕಿದ್ದ, 1000ನೇ ಜನ್ಮದಿನದ ಸ್ಮರಣಾರ್ಥ ಗರ್ಭಗುಡಿಯಲ್ಲಿ 120 ಕೆಜಿ ಚಿನ್ನದಿಂದ, 216 ಅಡಿ ಎತ್ತರದ ರಾಮಾನುಜರ ಸಮಾನತೆಯ ಪ್ರತಿಮೆ ನಿರ್ಮಿಸಲಾಗಿದ್ದು, ರಾಮನುಜರ ಪ್ರತಿಮೆ ಸ್ಥಾಪಿಸಲು ಜಗತ್ತಿನಾದ್ಯಂತ 1000 ಕೋಟಿ ದೇಣಿಗೆ ಸಂಗ್ರಹವಾಗಿತ್ತು.
ಇನ್ನು, ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್ನ ಬೇಟಿ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಪ್ರಧಾನಿ ಭದ್ರತೆಗಾಗಿ ಸುಮಾರು 7,000 ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.