ಬೆಂಗಳೂರು: ಗ್ರಾಮೀಣ ಭಾಗದ ಮನೆಗಳಿಗೆ ನೀರು ಒದಗಿಸುವ ಮನೆಮನೆಗೂ ಗಂಗೆ ಯೋಜನೆ ಸಾಕಾರಗೊಳಿಸಲು ರಾಜ್ಯದ 50,000 ಗ್ರಾಮಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ.
ಇನ್ನು, ಮನೆಮನೆಗೂ ಗಂಗೆ ಯೋಜನೆಯಲ್ಲಿ ಈವರೆಗೆ 2,693 ಗ್ರಾಮಗಳ ಪ್ರತಿ ಮನೆಗೂ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ಜನರಿಗೆ ಶುದ್ಧ ನೀರು ನೀಡಲು ನೀರು ಪರೀಕ್ಷೆ ಕಡ್ಡಾಯ ಮಾಡಲಾಗಿದ್ದು, ಇದಕ್ಕಾಗಿ ರಾಜ್ಯದ 46 ತಾಲ್ಲೂಕಿನಲ್ಲಿ ತಲಾ 1 ಪ್ರಯೋಗಾಲಯ ಸ್ಥಾಪಿಸಲಾಗಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಗ್ರಾಮೀಣ ಭಾಗದ ಮನೆಗಳಿಗೆ ನೀರು ಒದಗಿಸುವ ಮನೆಮನೆಗೂ ಗಂಗೆ ಯೋಜನೆ ಸಾಕಾರಗೊಳಿಸಿದರೆ, ಹಳ್ಳಿಗಳಲ್ಲಿ ಆಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಲಿದೆ.