ಯಾವುದೇ ರಿಸ್ಕ್ ಇಲ್ಲದೆ ನಿಖರವಾದ ಆದಾಯವನ್ನು ಪಡೆಯಲು ಬಯಸುತ್ತಿದ್ದೀರಾ ? ಅದಕ್ಕಾಗಿ , ನಿಮಗೆ ಸಾಕಷ್ಟು ಆಯ್ಕೆಗಳಿದ್ದು, ಅಂಚೆ ಕಛೇರಿ ಯೋಜನೆಗಳು ಸಹ ಇದರ ಒಂದು ಭಾಗವಾಗಿದೆ. ಅಂಚೆ ಕಚೇರಿಯಲ್ಲಿ ವಿವಿಧ ರೀತಿಯ ಉಳಿತಾಯ (Saving) ಯೋಜನೆಗಳಿದ್ದು, ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಮುಕ್ತಾಯದ ಸಮಯದಲ್ಲಿ ಆಕರ್ಷಕ ಆದಾಯವನ್ನು ಗಳಿಸಬಹುದು. ನೀವು ಆಯ್ಕೆ ಮಾಡುವ ಯೋಜನೆಗೆ ಅನುಗುಣವಾಗಿ ನೀವು ಪಡೆಯುವ ಪ್ರಯೋಜನಗಳು ಸಹ ಬದಲಾಗುತ್ತವೆ.
ಪೋಸ್ಟ್ ಆಫೀಸ್ ನೀಡುವ ಯೋಜನೆಗಳಲ್ಲಿ ಮರುಕಳಿಸುವ ಠೇವಣಿ (Recurring Deposit) ಯೋಜನೆ ಕೂಡ ಒಂದು. ಅಂದರೆ, ನೀವು ಈ ಯೋಜನೆಗೆ ಸೇರಿದರೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಠೇವಣಿ ಮಾಡಬೇಕು. ಹೀಗೆ ನಿಗದಿತ ಅವಧಿವೆರೆಗೆ ಹೂಡಿಕೆ ಮಾಡಬೇಕು. ನಂತರ ಮೆಚ್ಯೂರಿಟಿ ಸಮಯದಲ್ಲಿ ನೀವು ಒಮ್ಮೆಗೆ ದೊಡ್ಡ ಮೊತ್ತವನ್ನು ಪಡೆಯಬಹುದು. ಯಾವುದೇ ರಿಸ್ಕ್ ಇರುವುದಿಲ್ಲ. ನಿಮ್ಮ ಹಣಕ್ಕೆ ಸಂಪೂರ್ಣ ಭರವಸೆ ಇರುತ್ತದೆ
ನೀವು ಪೋಸ್ಟ್ ಆಫೀಸ್ ಆರ್ಡಿ ಸೇವೆಗಳನ್ನು 100 ರೂ.ಗಳೊಂದಿಗೆ ಪ್ರಾರಂಭಿಸಬಹುದು. ಗರಿಷ್ಠ ಮಿತಿಯಿಲ್ಲ. ನೀವು ಪ್ರತಿ ತಿಂಗಳು ಯಾವುದೇ ಮೊತ್ತವನ್ನು ಠೇವಣಿ ಮಾಡಬಹುದು. ನೀವು ಎಷ್ಟು ಹೆಚ್ಚು ಹೂಡಿಕೆ ಮಾಡುತ್ತೀರೋ ಅಷ್ಟು ನಿಮ್ಮ ಆದಾಯವು ಹೆಚ್ಚಾಗುತ್ತದೆ. ಪೋಸ್ಟ್ ಆಫೀಸ್ ಆರ್ಡಿ ಸ್ಕೀಮ್ ಮೆಚ್ಯೂರಿಟಿ ಅವಧಿಯು ಐದು ವರ್ಷಗಳು. ಅಂದರೆ ನೀವು 5 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಬೇಕಾದರೆ ಇದನ್ನು ವಿಸ್ತರಿಸಬಹುದು.
ಪ್ರಸ್ತುತ, ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ (Recurring Deposit) ಯೋಜನೆಯು ಶೇಕಡಾ 5.8 ರ ಬಡ್ಡಿದರವನ್ನು ನೀಡುತ್ತಿದ್ದು, ಕೇಂದ್ರ ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಈ ಬಡ್ಡಿದರವನ್ನು ಪರಿಶೀಲಿಸುತ್ತದೆ. ಆದ್ದರಿಂದ ಬಡ್ಡಿದರಗಳು ಕೂಡ ಬದಲಾಗಬಹುದು. ಈ ಯೋಜನೆಯಲ್ಲಿ ನೀವು ತಿಂಗಳಿಗೆ 10,000 ರೂ ಹೂಡಿಕೆ ಮಾಡಿದರೆ, ನೀವು ಮುಕ್ತಾಯದ ಸಮಯದಲ್ಲಿ 16.28 ಲಕ್ಷ ರೂ ಪಡೆಯುತ್ತೀರಿ. ಇದಕ್ಕೆ ಹತ್ತು ವರ್ಷಗಳ ಕಾಲ ಹೂಡಿಕೆ ಮಾಡಬೇಕು.
ಪೋಸ್ಟ್ ಆಫೀಸ್ ಆರ್ಡಿ ಯೋಜನೆಯಲ್ಲಿ ಟಿಡಿಎಸ್ ಮತ್ತು ಪೆನಾಲ್ಟಿಗಳೂ ಇರುತ್ತವೆ ಎಂಬುದನ್ನು ನೆನಪಿನಲ್ಲಿಡಬೇಕಾಗುತ್ತದೆ. ನೀವು ಪ್ರತಿ ತಿಂಗಳು ಪಾವತಿಸದಿದ್ದರೆ ನೀವು ದಂಡದ ಶುಲ್ಕವನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ನೀವು ಠೇವಣಿ ಮಾಡಿದ ಮೊತ್ತದ ಮೇಲಿನ ಬಡ್ಡಿ ಆದಾಯದ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಅದಕ್ಕೆ ನೀವು ಫಾರ್ಮ್ 15G ಅನ್ನು ಸಲ್ಲಿಸಬೇಕಾಗುತ್ತದೆ.