ಬೆಂಗಳೂರು: ರಾಜ್ಯದಲ್ಲಿ ಇಂದು 24,172 ನೂತನ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 56 ಜನ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ತಿಳಿಸಿದ್ದಾರೆ.
ಇದೇ ಅವಧಿಯಲ್ಲಿ 30,869 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಸದ್ಯ ರಾಜ್ಯದಲ್ಲಿ ಶೇ.17.11ರಷ್ಟು ಪಾಸಿಟಿವಿಟಿ ದರವಿದ್ದು, ರಾಜ್ಯಾದ್ಯಂತ 2,44,331 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇನ್ನು, ನಿನ್ನೆ ರಾಜ್ಯದಲ್ಲಿ 28,264 ಕೇಸ್ ಪತ್ತೆಯಾಗಿದ್ದವು.
24,172 ಕೇಸ್: ಯಾವ ಜಿಲ್ಲೆಯಲ್ಲಿ, ಎಷ್ಟು?
ಬಾಗಲಕೋಟೆ-325, ಬಳ್ಳಾರಿ-502, ಬೆಳಗಾವಿ-900, ಬೆಂ. ಗ್ರಾ.-517, ಬೆಂ.ನಗರ-10692, ಬೀದರ್-84, ಚಾಮರಾಜನಗರ-455, ಚಿಕ್ಕಬಳ್ಳಾಪುರ-267, ಚಿಕ್ಕಮಗಳೂರು-155, ಚಿತ್ರದುರ್ಗ-494, ದ. ಕನ್ನಡ-363, ದಾವಣಗೆರೆ-172,ಕೊಡಗು-402, ಕೋಲಾರ-357, ಕೊಪ್ಪಳ-327, ಧಾರವಾಡ-1044, ಗದಗ-143, ಹಾಸನ-689, ಹಾವೇರಿ-328, ಕಲಬುರಗಿ-499, ಮಂಡ್ಯ-809, ಮೈಸೂರು-1357, ರಾಯಚೂರು-155, ರಾಮನಗರ-84, ಶಿವಮೊಗ್ಗ-496, ತುಮಕೂರು-1090, ಉಡುಪಿ-337, ಉ. ಕನ್ನಡ-753, ವಿಜಯಪುರ-121, ಯಾದಗಿರಿ-285.