ಹರಪನಹಳ್ಳಿ: ತಾಲ್ಲೂಕಿನ ಗೌರಿಪುರ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಚಿಟಗೇರಿ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಬಸವನಾಳು ಚಂದ್ರಪ್ಪ ಬಂಧಿತ ಆರೋಪಿಯಾಗಿದ್ದು, ಮತ್ತೊಬ್ಬ ಆರೋಪಿತ ಬಸವನಾಳು ದುರುಗಪ್ಪ ತಲೆಮರೆಸಿಕೊಂಡಿದ್ದಾನೆ. 67 ಲೀಟರ್ ಮದ್ಯ ಮತ್ತು ₹14 ಸಾವಿರ ನಗದು ಜಫ್ತಿ ಮಾಡಲಾಗಿದ್ದು, ಡಿವೈಎಸ್ಪಿ ಹಾಲಮೂರ್ತಿ ರಾವ್, ಸಿಪಿಐ ನಾಗರಾಜ್ ಕಮ್ಮಾರ್ ಮಾರ್ಗದರ್ಶನದಲ್ಲಿ ಪಿಎಸ್ಐ ನಾಗರಾಜ್ ಅವರ ತಂಡ ದಾಳಿ ನಡೆಸಿತ್ತು.
ಕಾರ್ಯಾಚರಣೆಯಲ್ಲಿ ಚಿಗಟೇರಿ ಪೊಲೀಸ್ ಠಾಣೆ ಸಿಬ್ಬಂದಿಯಾದ ಬಿ. ದೇವೇಂದ್ರಪ್ಪ, ಎಚ್. ಅಂಜಿನಪ್ಪ, ಇಮಾಮ್ ಸಾಹೇಬ್, ಟಿ. ಎಂ. ಗೋವರ್ಧನ್ ಇದ್ದರು. ಇನ್ನು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಾಗಿದೆ.




