ಚಿತ್ತೂರು: ದೇವರಿಗೆ ಹರಕೆ ತೀರಿಸುವಾಗ ಕುರಿ ಬಲಿ ಕೊಡುವ ಬದಲು ಕುರಿ ಹಿಡಿದು ನಿಂತಿದ್ದ ವ್ಯಕ್ತಿಯ ತಲೆಯನ್ನೇ ಕತ್ತರಿಸಿರುವ ದಾರುಣ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ.
ಮೃತನ ಹೆಸರು ಟಿ.ಸುರೇಶ್ ಎಂದು ತಿಳಿದುಬಂದಿದ್ದು, ದನಗಳ ಜಾತ್ರೆ ಹಿನ್ನೆಲೆಯಲ್ಲಿ ಕುರಿಗಳನ್ನು ಬಲಿ ಕೊಡಲಾಗುತ್ತದೆ. ಬಲಿ ಕೊಡಲು ಸುರೇಶ್ ಎಂಬುವರು ಕುರಿ ಹಿಡಿದುಕೊಂಡಿದ್ದು, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಕುರಿಯನ್ನು ಕಡಿಯುವ ಬದಲು ಕುರಿ ಹಿಡಿದುಕೊಂಡಿದ್ದ ವ್ಯಕ್ತಿಯ ತಲೆಯನ್ನೇ ಕಡಿದಿದ್ದಾರೆ.
ಇನ್ನು, ಈ ದಾರುಣ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.