ನೀವು ಯಾವುದಾದರು ಯೋಜನೆಗೆ ಸೇರಲು ಬಯಸುತ್ತಿದ್ದೀರಾ? ಅಗಾದರೆ, ನಿಮಗಾಗಿ ಹಲವು ಆಯ್ಕೆಗಳು ಲಭ್ಯವಿವೆ. ಅಂಚೆ ಕಚೇರಿಗಳು ಮತ್ತು ಬ್ಯಾಂಕ್‌ಗಳಲ್ಲಿ ವಿವಿಧ ಯೋಜನೆಗಳು ಲಭ್ಯವಿದ್ದು, ಇದರಲ್ಲಿ ತೊಡಗಿಸಿಕೊಂಡು ಉತ್ತಮ ಆದಾಯವನ್ನು ಪಡೆಯಬಹುದು.ಇಂತಹ ಯೋಜನೆಯಲ್ಲಿ NPS ಕೂಡ ಒಂದು ಯೋಜನೆಯಾಗಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು NPS ಮೂಲಕ ಮೂರು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಒಮ್ಮೆಲೇ ಕೈಗೆ ಹಣ ಬರುತ್ತದೆ. ಇನ್ನು, ಪ್ರತಿ ತಿಂಗಳು ಪಿಂಚಣಿ ಸಿಗುತ್ತದೆ. ಇನ್ನೂ ತೆರಿಗೆ ವಿನಾಯಿತಿ ಪ್ರಯೋಜನಗಳೂ ಇವೆ. ಅದಕ್ಕಾಗಿಯೇ ಅನೇಕ ಖಾಸಗಿ ವಲಯದ ಉದ್ಯೋಗಿಗಳು ಈ ಯೋಜನೆಗೆ ಸೇರುತ್ತಿದ್ದಾರೆ.
ನಿಮಗೆ ಕೆಲಸ ಸಿಕ್ಕಿದ ತಕ್ಷಣ ಅಂದರೆ ಸುಮಾರು 24ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿದರೆ ಏನೆಲ್ಲಾ ಲಾಭಗಳು ಸಿಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ. ನೀವು ದಿನಕ್ಕೆ ರೂ.400 ಉಳಿಸಿ ಮತ್ತು ತಿಂಗಳ ಕೊನೆಯಲ್ಲಿ ರೂ.12,000 ಅನ್ನು ಎನ್‌ಪಿಎಸ್‌ನಲ್ಲಿ ಹಾಕಿದರೆ, ನೀವು ಮೆಚ್ಯೂರಿಟಿ ಸಮಯದಲ್ಲಿ ದೊಡ್ಡ ಮೊತ್ತವನ್ನು ಪಡೆಯಬಹುದು.
ಮೆಚ್ಯೂರಿಟಿ ಸಮಯದಲ್ಲಿ 5 ಕೋಟಿ ರೂ.ಸಿಗುತ್ತದೆ. ಅದರಲ್ಲಿ ಶೇ.60ರಷ್ಟು ಹಿಂಪಡೆಯಬಹುದು. ಉಳಿದ ಮೊತ್ತವನ್ನು ವರ್ಷಾಶನ ಯೋಜನೆಯಲ್ಲಿ ಹಾಕಬೇಕು. ಅಂದರೆ 3 ಕೋಟಿ ಕೈಗೆ ಬರಲಿದ್ದು, ಇನ್ನೂ 2 ಕೋಟಿ ಹೂಡಿಕೆ ಮಾಡಬೇಕಾಗುತ್ತದೆ. ಇದರಿಂದ ತಿಂಗಳಿಗೆ 1 ಲಕ್ಷ ರೂಪಾಯಿ ಪಿಂಚಣಿ ಬರುತ್ತದೆ. ವರ್ಷಾಶನ ದರವನ್ನು ಶೇಕಡಾ 6 ಎಂದು ಪರಿಗಣಿಸಲಾಗುತ್ತದೆ.