ಬೆಂಗಳೂರು: ಕೊರೋನಾ ಮೂರನೇ ಅಲೆ ಭೀತಿಯ ನಡುವೆ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು, ಆತಂಕಕ್ಕೆ ಕಾರಣವಾಗಿದ್ದು, ಕಳೆದ 24 ಗಂಟೆಗಳಲ್ಲಿ 1639 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2888341ಕ್ಕೆ ಏರಿಕೆಯಾಗಿದೆ.
ಇನ್ನು, ಒಂದೇ ದಿನ 36 ಜನ ಕೊರೋನಾಗೆ ಮೃತಪಟ್ಟಿದ್ದು, ಇನ್ನು ಕಳೆದ 24 ಗಂಟೆಗಳಲ್ಲಿ 2214 ಜನ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2826411 ಏರಿಕೆಯಾಗಿದ್ದು, ಸದ್ಯ 25645 ಸಕ್ರಿಯ ಪ್ರಕರಣಗಳಿವೆ.
ಇಂದೇ 1,639 ಕೇಸ್: ಯಾವ ಜಿಲ್ಲೆಯಲ್ಲಿ ಎಷ್ಟು?
ಬಾಗಲಕೋಟೆ-3, ಬಳ್ಳಾರಿ-14, ಬೆಳಗಾವಿ-61, ಬೆಂ.ಗ್ರಾ-25, ಬೆಂಗಳೂರು-419, ಬೀದರ್-0, ಚಾಮರಾಜನಗರ-22, ಚಿಕ್ಕಬಳ್ಳಾಪುರ-15, ಚಿಕ್ಕಮಗಳೂರು-92, ಚಿತ್ರದುರ್ಗ-29, ದ.ಕನ್ನಡ-190, ದಾವಣಗೆರೆ-13, ಧಾರವಾಡ-19, ಗದಗ-1, ಹಾಸನ-141, ಹಾವೇರಿ-2, ಕಲಬುರಗಿ-2, ಕೊಡಗು-63, ಕೋಲಾರ-35 ಕೊಪ್ಪಳ-5, ಮಂಡ್ಯ-60, ಮೈಸೂರು-160, ರಾಯಚೂರು-1, ರಾಮನಗರ-5, ಶಿವಮೊಗ್ಗ-37, ತುಮಕೂರು-63, ಉಡುಪಿ-104, ಉ.ಕನ್ನಡ-48, ವಿಜಯಪುರ-10, ಯಾದಗಿರಿ-0 ಪ್ರಕರಣಗಳು ಪತ್ತೆಯಾಗಿವೆ.