ಬೆಂಗಳೂರು: ಇಂದು ಸಂಜೆ 4:30ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಈ ಬಾರಿ ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳನ್ನು ಪಾಸು ಮಾಡಲಾಗುತ್ತಿದ್ದು, ಈ ಹಿಂದಿನ ತರಗತಿಗಳ ಅಂಕ ಹಾಗೂ ಅಸೆಸ್ಮೆಂಟ್ ಪರಿಗಣಿಸಿ ಅಂಕ ನೀಡಲಾಗುತ್ತಿದ್ದು, ಈ ಬಾರಿ ಯಾವುದೇ ರೀತಿಯ ರ‍್ಯಾಂಕ್ ಪಟ್ಟಿಯನ್ನು ಘೋಷಿಸಲಾಗುವುದಿಲ್ಲ.
ಇನ್ನು, ವಿದ್ಯಾರ್ಥಿಗಳು ಅಧಿಕೃತವಾಗಿ ನೀಡುವ ಜಾಲತಾಣಕ್ಕೆ ಭೇಟಿ ನೀಡಿ, ತಮ್ಮ ಫಲಿತಾಂಶ ವೀಕ್ಷಿಸಬಹುದಾಗಿದೆ.
ಪಿಯುಸಿ ರಿಸಲ್ಟ್; ನೋಡೋದು ಹೇಗೆ?
ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಇಂದು 4.30ಕ್ಕೆ ಪ್ರಕಟವಾಗಲಿದ್ದು, ಪರೀಕ್ಷೆ ನಡೆಯದ ಹಿನ್ನೆಲೆ ವಿದ್ಯಾರ್ಥಿಗಳಿಗೆ ನೋಂದಣಿ ನಂಬರ್ ಸಿಕ್ಕಿಲ್ಲ.
ಆದ್ದರಿಂದ ಫಲಿತಾಂಶ ನೋಡುವ ಸಲುವಾಗಿ ವಿದ್ಯಾರ್ಥಿಗಳಿಗೆ ಹೊಸ ರಿಜಿಸ್ಟರ್ ನಂಬರ್ ಜನರೇಟ್ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ವೆಬ್ ಸೈಟ್ (http://pue.kar.nic.in)ನಲ್ಲಿ know your Number ಆಯ್ಕೆ ಮೂಲಕ ವಿದ್ಯಾರ್ಥಿಗಳು ಪರಿಶೀಲಿಸಬಹುದು. ಜನರೇಟ್ ಆದ ರಿಜಿಸ್ಟರ್ ನಂಬರ್ ಮೂಲಕ ಈ ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಿ.