ಕೆಲವರಿಗೆ ಸುಮ್ಮನೆ ಕುಳಿತಿರುವಾಗ ಕಾಲು ಅಲುಗಾಡಿಸುವ ಅಭ್ಯಾಸವಿರುತ್ತದೆ. ಆದರಲ್ಲೂ ಮುಖ್ಯವಾಗಿ ಯುವಕರು ಇಂತಹ ಅಭ್ಯಾಸವನ್ನಿಟ್ಟುಕೊಂಡಿರುತ್ತಾರೆ.
ಅಂದಗಾಗೆಯೇ ಕಾಲು ಅಲುಗಾಡಿಸುವ ಅಭ್ಯಾಸ ಶುರುವಾಗಲು ಮುಖ್ಯ ಕಾರಣ ಕಬ್ಬಿನಾಂಶದ ಕೊರತೆ. ಹೀಗಾಗಿ ಕೆಲವರು ಕಾಲು ಅಲುಗಾಡಿಸುತ್ತಾ ಕುಳಿತಿರುತ್ತಾರೆ.
ನಿದ್ರಾಹೀನತೆಯಿಂದಲೂ ಈ ಸಮಸ್ಯೆ ಬರಬಹುದಾಗಿದ್ದು, ಹಾರ್ಮೋನ್ ಅಸಮತೋಲನದಿಂದಾಗಿಯೂ ವ್ಯಕ್ತಿಗೆ ಕಾಲನ್ನು ಅಲುಗಾಡಿಸಬೇಕು ಎಂದು ಅನಿಸುತ್ತದೆ.
ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಹೆಚ್ಚಿದ್ದರೆ ಈ ಸಮಸ್ಯೆ ಕಾಡಬಹುದಾಗಿದ್ದು, ಮಾನಸಿಕ ಸಮಸ್ಯೆ, ಹೆದರಿಕೆ ಇರುವವರೂ ಸಹ ಈ ರೀತಿ ಮಾಡುತ್ತಾರೆ.
ಇನ್ನು, ಈ ಕಾಲನ್ನು ಅಲುಗಾಡಿಸುವ ಸಮಸ್ಯೆ ದೂರಮಾಡಬೇಕಾದರೆ ಕಬ್ಬಿಣಾಂಶದ ಮಾತ್ರೆಗಳನ್ನು ತೆಗೆದುಕೊಳ್ಳಿ.