ನವದೆಹಲಿ: ಭಾರತದಲ್ಲಿ ಬಿಸಿಗಾಳಿಗೆ 50 ವರ್ಷಗಳಲ್ಲಿ 17 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ಆಘಾತಕಾರಿ ಸುದ್ದಿಯನ್ನು ಹವಾಮಾನ ತಜ್ಞರು ಸಂಶೋಧನಾ ವರದಿಯಲ್ಲಿ ತಿಳಿಸಿದ್ದಾರೆ.
ಹೌದು, ಹವಾಮಾನ ವೈಪರೀತ್ಯದಿಂದಾಗಿ ಕಳೆದ 50 ವರ್ಷಗಳ ಅವಧಿಯಲ್ಲಿ ಅಂದರೆ, 1971-2019ರಲ್ಲಿ ಸುಮಾರು 1,41,308 ಮಂದಿ ಸಾವಿಗೀಡಾಗಿದ್ದು, ಅದರಲ್ಲಿ ಬಿಸಿಗಾಳಿಯ ಕಾರಣಕ್ಕಾಗಿಯೇ 17,362 ಮಂದಿ ಸಾವಿಗೀಡಾಗಿದ್ದಾರೆ ಎಂದು ಹವಾಮಾನ ತಜ್ಞರು ಸಂಶೋಧನಾ ವರದಿಯಲ್ಲಿ ತಿಳಿಸಿದ್ದಾರೆ.
ಇನ್ನು, ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್, ಕಮಲ್‌ಜಿತ್ ರೇ, ಎಸ್.ಎಸ್ ರೇ ಅವರನ್ನೊಳಗೊಂಡ ತಂಡವು ಈ ಸಂಶೋಧನಾ ವರದಿಯನ್ನು ಪ್ರಕಟಿಸಿದ್ದು, ಕಮಲ್‌ಜಿತ್ ರೇ ಅವರು ಈ ವರಿದಿಯ ಮುಖ್ಯ ಲೇಖಕರಾಗಿದ್ದಾರೆ.