ಮುಂದೊಂದು ದಿನ ನಿಮ್ಮನ್ನು ಭೇಟಿಯಾಗುವೆ: ಭರವಸೆ ನೀಡಿದ ಕಿರಿಕ್ ಬೆಡಗಿ ರಶ್ಮಿಕಾ

ಬೆಂಗಳೂರು: ಪಕ್ಕದ ರಾಜ್ಯ ತೆಲಂಗಾಣದಿಂದ ತನ್ನನ್ನು ಕಾಣಲು ಬಂದು ನಿರಾಸೆಯಿಂದ ವಾಪಸ್ಸಾದ ಅಭಿಮಾನಿಗೆ ಮೀಟ್ ಆಗುತ್ತೇನೆ ಎಂದು ನ್ಯಾಷನಲ್ ಕ್ರಶ್, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಭರವಸೆ ನೀಡಿದ್ದಾರೆ. ಹೌದು ತೆಲಂಗಾಣದ ಆಕಾಶ್ ತ್ರಿಪಾಠಿ…

actress-rashmika-mandana-vijayaprabha

ಬೆಂಗಳೂರು: ಪಕ್ಕದ ರಾಜ್ಯ ತೆಲಂಗಾಣದಿಂದ ತನ್ನನ್ನು ಕಾಣಲು ಬಂದು ನಿರಾಸೆಯಿಂದ ವಾಪಸ್ಸಾದ ಅಭಿಮಾನಿಗೆ ಮೀಟ್ ಆಗುತ್ತೇನೆ ಎಂದು ನ್ಯಾಷನಲ್ ಕ್ರಶ್, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಭರವಸೆ ನೀಡಿದ್ದಾರೆ.

ಹೌದು ತೆಲಂಗಾಣದ ಆಕಾಶ್ ತ್ರಿಪಾಠಿ ಎಂಬ ಅಭಿಮಾನಿ ರಶ್ಮಿಕಾ ಅವರನ್ನು ಕಾಣಲು ವಿರಾಜಪೇಟೆಗೆ ಬರುವ ದಾವಂತದಲ್ಲಿ ವಿರಾಜಪೇಟೆಯ ಮಗ್ಗುಲ ಗ್ರಾಮಕ್ಕೆ ತೆರಳಿ ಅಲ್ಲಿ ನಟಿ ರಶ್ಮಿಕಾ ಮನೆ ಎಲ್ಲಿ ಎಂದು ಸ್ಥಳೀಯರನ್ನು ವಿಚಾರಿಸಿದ್ದ. ಆತನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಎಚ್ಚರಿಕೆ ನೀಡಿ ವಿರಾಜಪೇಟೆ ಪೊಲೀಸರು ವಾಪಸ್ ಕಳುಹಿಸಿದ್ದರು.

Vijayaprabha Mobile App free

Rashmika Mandanna

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದನ್ನು ನೋಡಿದ ನಟಿ ರಶ್ಮಿಕಾ ಟ್ವೀಟ್ ಮಾಡಿ, ಖಂಡಿತವಾಗಿಯೂ ಮುಂದೊಂದು ದಿನ ನಿಮ್ಮನ್ನು ಭೇಟಿಯಾಗುವೆ ಎಂದು ಭರವಸೆ ನೀಡಿದ್ದಾರೆ. ‘ಅಷ್ಟು ದೂರದಿಂದ ನನ್ನನ್ನು ಕಾಣಲು ಬಂದಿದ್ದೀರಿ. ಆದರೆ ನಿಮ್ಮನ್ನು ಭೇಟಿ ಆಗದಿರುವುದಕ್ಕೆ ವಿಷಾದಿಸುತ್ತೇನೆ ಎಂದು ಹೇಳಿದ್ದು, ಮುಂದೊಂದು ದಿನ ನಿಮ್ಮನ್ನು ಭೇಟಿಯಾಗುವೆ.

rashmika mandanna vijayaprabha

ನನ್ನ ಮೇಲೆ ನಿಮ್ಮ ಪ್ರೀತಿ ಇದೆ ರೀತಿ ಇರಲಿ. ಆದರೆ, ಹೀಗೆ ದೂರದಿಂದ ಕಷ್ಟಪಟ್ಟು ನನ್ನನ್ನು ಭೇಟಿಯಾಗುವ ತೊಂದರೆ ತೆಗೆದುಕೊಳ್ಳಬೇಡಿ, ಮುಂದೊಮ್ಮೆ ಭೇಟಿಯಾಗುವ ಸಂದರ್ಭ ಬರಬಹುದು’ ಎಂದು ರಶ್ಮಿಕಾ ಅಭಿಮಾನಿಯನ್ನು ಸಂತೈಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.