ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 3709 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2815029ಕ್ಕೆ ಏರಿಕೆಯಾಗಿದೆ.
ಇನ್ನು, ಒಂದೇ ದಿನ 139 ಜನ ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 34164ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 8111 ಜನ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2662250ಕ್ಕೆ ಏರಿಕೆಯಾಗಿದ್ದು, ಸದ್ಯ 118592 ಸಕ್ರಿಯ ಪ್ರಕರಣಗಳಿವೆ.
ಇಂದೇ 3709 ಸೋಂಕು: ಯಾವ ಜಿಲ್ಲೆಯಲ್ಲಿ ಎಷ್ಟು?:
ಬಾಗಲಕೋಟೆ-7, ಬಳ್ಳಾರಿ-44, ಬೆಳಗಾವಿ-134, ಬೆಂ.ಗ್ರಾ-103, ಬೆಂಗಳೂರು-803, ಬೀದರ್-6, ಚಾಮರಾಜನಗರ-56, ಚಿಕ್ಕಬಳ್ಳಾಪುರ-38, ಚಿಕ್ಕಮಗಳೂರು-163, ಚಿತ್ರದುರ್ಗ-77, ದ.ಕನ್ನಡ-374, ದಾವಣಗೆರೆ-90, ಧಾರವಾಡ-30, ಗದಗ-21, ಹಾಸನ-309, ಹಾವೇರಿ-13, ಕಲಬುರಗಿ-14, ಕೊಡಗು-161, ಕೋಲಾರ-65, ಕೊಪ್ಪಳ-25, ಮಂಡ್ಯ-124, ಮೈಸೂರು-486, ರಾಯಚೂರು-15, ರಾಮನಗರ-20, ಶಿವಮೊಗ್ಗ-169, ತುಮಕೂರು-144, ಉಡುಪಿ-81, ಉ.ಕನ್ನಡ-114, ವಿಜಯಪುರ-16, ಯಾದಗಿರಿ-11ಪ್ರಕರಣಗಳು ಪತ್ತೆಯಾಗಿವೆ.