ಹೈದರಾಬಾದ್: ಮದುವೆ ಮಾಡಿದ ವಧುವರರ ಕುಟುಂಬಸ್ಥರು ಸಂಭ್ರಮದಲ್ಲಿ ಮುಳುಗಿ ತೇಲುತ್ತಿದ್ದರೆ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವೇ ನವವಿವಾಹಿತ ದುರಂತ ಅಂತ್ಯ ಕಂಡಿರುವ ದಾರುಣ ಘಟನೆ ತೆಲಂಗಾಣದ ಜೋಗುಲಾಂಬ ಗಡ್ವಾಲಾ ಜಿಲ್ಲೆಯ ವದ್ದೇಪಳ್ಳಿಯಲ್ಲಿ ನಡೆದಿದೆ.
ಹೌದು, ಸೂರ್ಯ ಬಾಬು ಮೃತ ದುದೈರ್ವಿಯಾಗಿದ್ದು, ಇವನ ಮದುವೆ ಭಾನುವಾರ ಸಂಜೆ ನಡೆದಿತ್ತು. ಮದ್ವೆಯಾದ ಐದೇ ತಾಸಿಗೆ ಅಂದರೆ ಆ ದಿನದ ರಾತ್ರಿಯೇ ಮದುಮಗ ಮನೆಯ ಕೋಣೆಯಲ್ಲಿ ನೇನುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಕಂಡು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.
ಇನ್ನು, ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದು, ಸಾವಿನ ಬಗ್ಗೆ ತನಿಖೆ ಮುಂದುವರಿಸಿದ್ದು, ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ತಿಳಿದು ಬಂದಿಲ್ಲ. ಆದರೆ ಮದುಮಗನ ಸಾವಿನಿಂದ ಮದುಮಗಳು ಮತ್ತು ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.