BIG NEWS: ಕೊರೋನಾ ನಡುವೆ ರಾಜ್ಯದಲ್ಲಿ 3,272 ಬಾಲ್ಯ ವಿವಾಹ

ಬೆಂಗಳೂರು: ಕೊರೋನಾ ನಡುವೆ ರಾಜ್ಯದಲ್ಲಿ 3,272 ಬಾಲ್ಯ ವಿವಾಹಗಳು ಆಗಿದ್ದು, 2008 ಎಫ್ಐಆರ್ ದಾಖಲಾಗಿವೆ ಎಂಬುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಮಾಹಿತಿ ನೀಡಿದ್ದಾರೆ. ಈ ಕುರಿತು ಮೈಸೂರಿನಲ್ಲಿ…

ಬೆಂಗಳೂರು: ಕೊರೋನಾ ನಡುವೆ ರಾಜ್ಯದಲ್ಲಿ 3,272 ಬಾಲ್ಯ ವಿವಾಹಗಳು ಆಗಿದ್ದು, 2008 ಎಫ್ಐಆರ್ ದಾಖಲಾಗಿವೆ ಎಂಬುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಮಾಹಿತಿ ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಕರೋನ ನಡುವೆ ರಾಜ್ಯದಲ್ಲಿ ಒಟ್ಟು 3272 ಬಾಲ್ಯ ವಿವಾಹಗಳು ಆಗಿದ್ದು, ಬಾಲ್ಯ ವಿವಾಹ ಸಂಬಂಧ ಒಟ್ಟು 3,589 ದೂರುಗಳು ಬಂದಿದ್ದವು ಎಂದು ಹೇಳಿದರು.

ಇನ್ನು, ಬಾಲ್ಯ ವಿವಾಹ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ಆಶಾ ಕಾರ್ಯಕರ್ತೆಯರು, ಸರ್ಕಾರೇತರ ಸಂಘ ಸಂಸ್ಥೆಗಳು ಅಲರ್ಟ್ ಆಗಿ ಕೆಲಸ ಮಾಡುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಾಲ್ಯ ವಿವಾಹ ಪ್ರಮಾಣ ಕಡಿಮೆಯಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಅವರು ಹೇಳಿದರು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.