ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಸುಮಾರು 12 ವರ್ಷಗಳ ನಂತರ ತಮ್ಮ ಮೊದಲ ಹೆಂಡತಿ ಕವಿತಾ ಜೊತೆ ವಿಚ್ಛೇದನದ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿದ್ದು, ಈ ವಿಷಯವು ಬೀಟೌನ್‌ನಲ್ಲಿ ಹಾಟ್ ಟಾಪಿಕ್ ಆಗಿದೆ.
ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಪ್ರಮುಖ ಉದ್ಯಮಿ ರಾಜ್ ಕುಂದ್ರಾ ತಮ್ಮ ಮಾಜಿ ಪತ್ನಿ ಬಗ್ಗೆ ಮೊದಲ ಬಾರಿಗೆ ತೆರೆದಿಟ್ಟಿದ್ದು, ಸುಮಾರು 12 ವರ್ಷಗಳ ನಂತರ ತನ್ನ ಮೊದಲ ಹೆಂಡತಿ ಕವಿತಾ ಅವರೊಂದಿಗೆ ದೂರವಾಗಲು ಕಾರಣಗಳನ್ನು ಹೇಳುತ್ತಾ ಗುಟ್ಟು ಬಿಚ್ಚಿಟ್ಟಿದ್ದಾರೆ. ರಾಜ್ ಕುಂದ್ರಾ ಅವರ ಮೊದಲ ಪತ್ನಿ ಕವಿತಾ ಅವರೊಂದಿಗೆ ಬೇರೆಯಾಗಲು ನಟಿ ಶಿಲ್ಪಾ ಶೆಟ್ಟಿ ಕಾರಣ ಎಂದು ವೈರಲ್ ಆಗುತ್ತಿರುವ ಸುದ್ದಿಯನ್ನು ಖಂಡಿಸಿದ ಅವರು ಇತ್ತೀಚೆಗೆ ನೈಜ ವಿಷಯವನ್ನು ಇಂಗ್ಲಿಷ್ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ, ಈ ವಿಷಯವು ಬಿಟೌನ್ ನಲ್ಲಿ ಹಾಟ್ ಟಾಪಿಕ್ ಆಗಿದೆ.
ಕವಿತಾ ತನ್ನ ತಂಗಿ ಗಂಡನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು ಮತ್ತು ರಹಸ್ಯವಾಗಿ ಈ ಸಂಬಂಧವನ್ನು ನಡೆಸುತ್ತಿದ್ದಳು ಎಂದು ರಾಜ್ ಕುಂದ್ರಾ ಆರೋಪಿಸಿದರು. ಕೆಲವು ವರ್ಷಗಳ ಹಿಂದೆ ಲಂಡನ್‌ನಲ್ಲಿದ್ದಾಗ ಅವರ ಸಹೋದರಿ ಮತ್ತು ಅವರ ಪತಿ ನಮ್ಮೊಂದಿಗೆ ಇದ್ದರು, ಹೀಗೆ ಕವಿತಾಗೆ ತನ್ನ ತಂಗಿ ಗಂಡ ಹತ್ತಿರವಾಗಿದ್ದರು ಎಂದು ತನ್ನ ಗಮನಕ್ಕೆ ಬಂದಿತ್ತು ಎಂದು ಹೇಳಿದ್ದಾರೆ. ತಾನು ಬ್ಯುಸಿನೆಸ್ ಟ್ರಿಪ್ ಹೋದಾಗ, ಅವರಿಬ್ಬರ ನಡುವೆ ಏನಾದರೂ ನಡೆಯುತ್ತಿದೆ ಎಂದು ಅನುಮಾನಿಸಿದ್ದೆ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಕಾರ್ ಡ್ರೈವರ್ ಕೂಡ ಇದೇ ಮಾತನ್ನು ಹೇಳಿದರು ಎಂದು ಕುಂದ್ರಾ ಹೇಳಿದರು.
ಇದರೊಂದಿಗೆ ತನ್ನ ತಂಗಿ ಮತ್ತು ಆಕೆಯ ಪತಿಯನ್ನು ಇಂಡಿಯಾಗೆ ಕಳುಹಿಸಲಾಗಿತ್ತು, ಆದರೂ ಕೂಡ ಆತನೊಂದಿಗೆ ಕವಿತಾ ಕಮ್ಯುನಿಕೇಟ್ ಆಗುತ್ತಲೇ ಇದ್ದಳು ಎಂದು ಕುಂದ್ರಾ ಹೇಳಿದರು. ಅವರು ರಹಸ್ಯವಾಗಿ ಸೆಲ್ ಫೋನ್ ತೆಗೆದುಕೊಂಡು ಪದೇ ಪದೇ ಸಂದೇಶ ಕಳುಹಿಸುತ್ತಿದ್ದಳು ಎಂದು ಹೇಳಿದರು. ರಾಜ್ ಕುಂದ್ರಾ ತನ್ನ ಸಹೋದರಿ ಆ ಸಮಯದಲ್ಲಿ ಕರೆ ಮಾಡಿದಾಗ ತನ್ನ ಪತಿ ರಹಸ್ಯವಾಗಿ ಬಳಸುತ್ತಿರುವ ಫೋನ್ ಅನ್ನು ಸಿಕ್ಕಿದ್ದು, ಅದರಲ್ಲಿ ಯುಕೆ ನಂಬರ್ ನಿಂದ ಸಂದೇಶಗಳಿವೆ ಹೇಳಿದ್ದಳು. ಇದರಿಂದ ಅನುಮಾನ ಬಂದು ಮನೆಯನ್ನು ಸರ್ಚ್ ಮಾಡಿದಾಗ ಬಾತ್ ರೂಮ್ ನಲ್ಲಿ ಕವಿತಾ ಬಚ್ಚಿಟ್ಟಿದ್ದ ಫೋನ್ ನೋಡಿ ಆಘಾತಕ್ಕೊಳಗಾಗಿದ್ದೆ ಎಂದು ರಾಜ್ ಕುಂದ್ರಾ ಹೇಳಿದ್ದಾರೆ.