ನವದೆಹಲಿ: ನೆರೆ ಪರಿಹಾರ, ಲಸಿಕೆ, ಆಕ್ಸಿಜನ್, ಔಷಧ ವಿಚಾರದಲ್ಲಿ ರಾಜ್ಯವನ್ನು ಕಡೆಗಣಿಸಿದ್ದ ಕೇಂದ್ರ ಸರ್ಕಾರ, ಇದೀಗ ಮತ್ತೆ ಅದೇ ಧೋರಣೆ ಮುಂದುವರಿಸಿದೆ.
ಹೌದು, ಕೊರೋನಾ ಸೋಂಕಿಗೆ ತತ್ತರಿಸುತ್ತಿರುವ ಕರ್ನಾಟಕಕ್ಕೆ ಪ್ರಧಾನಿ ಮೋದಿ ಅವರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದ್ದು, ಒಟ್ಟು 17 ರಾಜ್ಯಗಳಿಗೆ ₹9,871 ಕೋಟಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ 3 ತಿಂಗಳಲ್ಲಿ ಕೇವಲ ₹407.76 ಕೋಟಿ ನೀಡಿದೆ.
ಆದರೆ, ಕೇರಳಕ್ಕೆ ₹4972.74 ಕೋಟಿ, ಬಂಗಾಳಕ್ಕೆ ₹4401.75 ಕೋಟಿ ಮತ್ತು ಆಂಧ್ರಪ್ರದೇಶ ₹4314.24 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.