ನವದೆಹಲಿ: ಕರ್ನಾಟಕ ಸೇರಿ ದೇಶದ ಇತರೆ ರಾಜ್ಯಗಳಲ್ಲೂ ಮುಂದಿನ 3 ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನೈಋತ್ಯ ಮಾರುತಗಳ ಬಲವರ್ಧನೆ ಮತ್ತು ಪಶ್ಚಿಮ ಬಂಗಾಳದ ಮೇಲೆ ಚಂಡಮಾರುತದ ಪರಿಚಲನೆಯಿಂದಾಗಿ, ಮುಂದಿನ 4-5 ದಿನಗಳಲ್ಲಿ ಈಶಾನ್ಯ ರಾಜ್ಯಗಳು ಮತ್ತು ಪೂರ್ವ ಭಾರತದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿದೆ.
ಇನ್ನು ಜೂನ್ 10ರ ವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಸೂಚಿಸಿದೆ.
ಇನ್ನು ಕರ್ನಾಟಕದಲ್ಲೂ ಸಹ ಜೂನ್ 10 ರವರೆಗೂ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಇಂದು ಮೋಡ ಕವಿದ ವಾತಾವರಣ ಇರಲಿದ್ದು, ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 29-21, , ಬೆಳಗಾವಿ: 28-21, ಮೈಸೂರು: 29-21, ಮಂಡ್ಯ: 29-21, ಮಂಗಳೂರು: 29-24, ಶಿವಮೊಗ್ಗ: 29-22, , ಹಾಸನ: 27-19, ಚಾಮರಾಜನಗರ: 30-21, ಚಿಕ್ಕಬಳ್ಳಾಪುರ: 27-19, ರಾಮನಗರ: 36-24, ಮಡಿಕೇರಿ: 24-18, ಕೋಲಾರ: 29-21, ತುಮಕೂರು: 28-21, ಉಡುಪಿ: 30-25, ಕಾರವಾರ: 30-26, ದಾವಣಗೆರೆ: 30-22, ಚಿಕ್ಕಮಗಳೂರು: 26-19, ಚಿತ್ರದುರ್ಗ: 28-21, ಹಾವೇರಿ: 30-22, ಗದಗ: 30-22, ಯಾದಗಿರಿ: 33-24, ವಿಜಯಪುರ: 20-21, ಬೀದರ್: 32-23, ಕೊಪ್ಪಳ: 31-23, ರಾಯಚೂರು: 33-25, ಕಲಬುರಗಿ: 33-24, ಬಾಗಲಕೋಟೆ: 33-22 ಡಿಗ್ರಿ ಸೆಲ್ಸಿಯಸ್ ಇರಲಿದೆ.




