ಕೋವಿಡ್-19 ಎರಡನೇ ಅಲೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ವರ್ಷದ ಸಿಬಿಎಸ್ಇ ಮತ್ತು ಐಸಿಎಸ್ಇ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಕೇಂದ್ರ ಸರಕಾರವು ಮಂಗಳವಾರ ಆದೇಶ ಹೊರಡಿಸಿತ್ತು.
ಪರೀಕ್ಷೆ ರದ್ದಾದ ಬೆನ್ನಲ್ಲೇ CBSE 12ನೇ ತರಗತಿಯ ಕುಕ್ಕಿ ಅಗರ್ವಾಲ್ ಎಂಬ ವಿದ್ಯಾರ್ಥಿ ಪ್ರಧಾನಿ ನರೇಂದ್ರ ಮೋದಿಯವರ ಬಳಿ ವಿಚಿತ್ರ ಮನವಿಯನ್ನು ಮಾಡಿದ್ದು, ಸರ್ ಪರೀಕ್ಷೆಯೇನೋ ರದ್ದು ಮಾಡಿದ್ದೀರ, ದಯವಿಟ್ಟು ಫೇರ್ವೆಲ್ ಕಾರ್ಯಕ್ರಮಕ್ಕಾದರೂ ಅನುಮತಿ ನೀಡಿ ಎಂದು ಕೇಳಿದ್ದು, ನಾನು ಫೇರ್ವೆಲ್ ಪಾರ್ಟಿಯಲ್ಲಿ ನೇಹಾಳನ್ನು ಸೀರೆಯಲ್ಲಿ ನೋಡಬೇಕು ಅಂದುಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾನೆ.
ಕುಕಿ ಅಗರ್ವಾಲ್ ಎಂಬ ವಿದ್ಯಾರ್ಥಿಯ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ನೋಡಿದವರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿದೆ.
Sir farewell to kraa do….wo 12th B wali neha ko साड़ी me dekhna tha. https://t.co/NkjG8A5Abg
— Kuki Aggarwal (@kukiaggarwal) June 1, 2021