ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಕಿರಿಕ್ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಯಲ್ಲಿ ನಟಿಸಿ ಅಗ್ರ ಶ್ರೇಯಾಂಕಿತ ನಾಯಕಿಯರಲ್ಲಿ ಒಬ್ಬರೆನಿದ್ದಾರೆ.
ಹೌದು, ಕನ್ನಡದ ಕಿರಿಕ್ ಪಾರ್ಟಿ, ಅಂಜನೀಪುತ್ರ, ಯಜಮಾನ, ಪೊಗರು ತೆಲುಗಿನ “ಗೀತಾ ಗೋವಿಂದಂ, ಸರಿಲೇರು ನಿಕೇವ್ವರು, ಭೀಷ್ಮ ಸಿನಿಮಾ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಸೂಪರ್ ಫಾರ್ಮ್ ನಲ್ಲಿದ್ದಾರೆ. ಇತ್ತೀಚೆಗೆ ತಮಿಳು ‘ಸುಲ್ತಾನ್’ ಚಿತ್ರದಲ್ಲಿ ನಟಿಸುವ ಮೂಲಕ ತಮಿಳು ಪ್ರೇಕ್ಷಕರನ್ನು ಮೆಚ್ಚಿಸಿದ ರಶ್ಮಿಕಾ, ಇತ್ತೀಚೆಗೆ ತನ್ನ ಮನಸ್ಸಿನಲ್ಲಿರುವ ಮಾತನ್ನು ಹೊರ ಹಾಕಿದ್ದಾರೆ. ಒಂದು ವೇಳೆ ನೀವು ಡೇಟಿಂಗ್ ಹೋಗಬೇಕಾದರೆ ಯಾವ ನಾಯಕನೊಂದಿಗೆ ಹೋಗುತ್ತೀರಿ ಎಂದಿದ್ದಕ್ಕೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ನಟಿ ರಶ್ಮಿಕಾ ಮಂದಣ್ಣ ಅನೇಕ ಆಸಕ್ತಿದಾಯಕ ಸಂಗತಿಗಳನ್ನು ಮತ್ತು ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದು, ಪ್ರಸ್ತುತ ಈಗಿರುವ ಸ್ಟಾರ್ ಹೀರೋಗಳಲ್ಲಿ ತನ್ನ ಕ್ರಷ್ ಯಾರು ಎಂದು ಹೇಳಿದ್ದಾರೆ. ಡೇಟಿಂಗ್ ಹೋಗಲು ನಿಮಗೆ ಅವಕಾಶ ಸಿಕ್ಕರೆ ನೀವು ಯಾವ ನಾಯಕನೊಂದಿಗೆ ಹೋಗುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಹೆಸರನ್ನು ಹೇಳಿದ್ದು, ಪ್ರಭಾಸ್ ಎಂದರೆ ನನಗೆ ತುಂಬಾ ಇಷ್ಟವೆಂದು ಮತ್ತು ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾಳೆ.
ರಶ್ಮಿಕಾ ಪ್ರಸ್ತುತ ತೆಲುಗಿನ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಸುಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ರಶ್ಮಿಕಾ ಈ ಸಿನಿಮಾದಲ್ಲಿ ಹಳ್ಳಿಯ ಹುಡುಗಿಯಂತೆ ವಿಭಿನ್ನ ನೋಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ.