ನವದೆಹಲಿ: ಫ್ಲ್ಯೂನಂತೆಯೇ ಕೊರೋನಾ ಸೋಂಕು ಕೂಡ ತಲೆ ತಲಾಂತರಗಳವರೆಗೆ ಕಾಡಲಿದೆ ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ನಿರ್ದೇಶಕ ಪ್ರೊ.ಜಿ.ವಿ.ಎಸ್. ಮೂರ್ತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜುಲೈ ಮಧ್ಯದಲ್ಲಿ ಪೂರ್ವ ಉತ್ತರ ಭಾರತದಲ್ಲಿ ಕರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದ್ದು,ಚೇತರಿಕೆಯ ನಂತರ ಇಮ್ಯುನಿಟಿ 3-6 ತಿಂಗಳ ಇರುತ್ತದೆ. ಹಾಗಾಗಿ, ಮುಂದಿನ 5-6 ತಿಂಗಳಲ್ಲಿ ಹೊಸ ಅಲೆ ಎದುರಾಗಬಹುದು ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ನಿರ್ದೇಶಕ ಪ್ರೊ.ಜಿ.ವಿ.ಎಸ್. ಮೂರ್ತಿ ಅವರು ಎಚ್ಚರಿಸಿದ್ದು,
2022ರ ಫೆಬ್ರವರಿವರೆಗೆ ಭಾರಿ ಪ್ರಮಾಣದಲ್ಲಿ ಜನ ಸೇರುವುದನ್ನು ನಿಷೇಧಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.