ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ ಕೇಂದ್ರ ಸರ್ಕಾರವು ರೈತರಿಗಾಗಿ ಬಹಳ ಮಹತ್ವಾಕಾಂಕ್ಷೆಯಿಂದ ತಂದಿರುವ ಯೋಜನೆಯಾಗಿದ್ದು, ಈ ಯೋಜನೆಯಡಿ ಕೇಂದ್ರ ಸರ್ಕಾರವು ನೇರವಾಗಿ ರೈತರಿಗೆ ಹಣವನ್ನು ಒದಗಿಸುತ್ತಿದೆ. ಅನ್ನದಾತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಮೋದಿ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ.
ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ವರ್ಷಕ್ಕೆ 6,000 ರೂ. ಸಿಗುತ್ತವೆ. ಆದರೆ ಈ ಹಣವನ್ನು ಏಕಕಾಲಕ್ಕಿಂತ ಹೆಚ್ಚಾಗಿ ಕಂತುಗಳಲ್ಲಿ ಅನ್ನದಾತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗುತ್ತದೆ. ರೈತರಿಗೆ ಮೂರು ಕಂತುಗಳಲ್ಲಿ 2,000 ರೂಪಾಯಿ ದರದಲ್ಲಿ ಈ ಹಣ ಸಿಗುತ್ತದೆ.
ಕೇಂದ್ರ ಸರ್ಕಾರ ಈಗಾಗಲೇ ಪಿಎಂ ಕಿಸಾನ್ ಯೋಜನೆಯಡಿ 7 ಕಂತುಗಳಲ್ಲಿ ಈ ಹಣವನ್ನು ಅನ್ನದಾತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಿದ್ದು, ಈಗ 8 ನೇ ಕಂತಿನ ಹಣ ಬಾಕಿ ಇದೆ. ವಿವಿಧ ವರದಿಗಳ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ 2 ಸಾವಿರ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎನ್ನಲಾಗಿದೆ.
ಈ 8 ನೇ ಕಂತಿನ ಹಣವನ್ನು ನೀವು ಪಡೆಯುತ್ತೀರಾ? ಇಲ್ಲವಾ? ಎಂಬುದನ್ನು ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕಾಗಿ ನೀವು ಪಿಎಂ ಕಿಸಾನ್ ಸ್ಕೀಮ್ https://pmkisan.gov.in/ ವೆಬ್ಸೈಟ್ಗೆ ಹೋಗಬೇಕು. ಫಲಾನುಭವಿಗಳ ಪಟ್ಟಿ (Beneficiary List) ಇರುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂದು ತಿಳಿದುಕೊಳ್ಳಬಹುದು. ಇದರಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಸಿಗುತ್ತದೆ. ಇಲ್ಲದಿದ್ದರೆ ಬರುವುದಿಲ್ಲ.