ಡುಪ್ಲೆಸಿಸ್, ಗಾಯಕ್ವಾಡ್ ಅರ್ಧಶತಕ; ಕೆಕೆಆರ್ ವಿರುದ್ಧ ಚೆನ್ನೈಗೆ 18 ರನ್‌ಗಳ ರೋಚಕ ಜಯ; ಅಗ್ರ ಸ್ಥಾನಕ್ಕೇರಿದ ಚೆನ್ನೈ

ಮುಂಬೈ: ವಾಂಖಡೆ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 14 ನೇ ಆವೃತ್ತಿಯ 15 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ 18 ರನ್‌ಗಳಿಂದ ರೋಚಕ ಗೆಲವು ದಾಖಲಿಸಿದೆ. .

ಚೆನ್ನೈ ನೀಡಿದ್ದ 221 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಕೆಕೆಆರ್ ಆರಂಭದಲ್ಲೇ ಸಾಲು ಸಾಲು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಪರಿಣಾಮವಾಗಿ 19.1 ಓವರ್‌ಗಳಲ್ಲಿ ಎಲ್ಲಾ 10 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿ 18 ರನ್ ಗಳ ಸೋಲು ಒಪ್ಪಿಕೊಂಡಿತು. ಕೆಕೆಆರ್ ಪರ ದಿನೇಶ್ ಕಾರ್ತಿಕ್ (40 ರನ್), ಆಂಡ್ರೆ ರಸ್ಸೆಲ್ (54 ರನ್) ಹಾಗೂ ಪ್ಯಾಟ್ ಕಮ್ಮಿನ್ಸ್ (ಅಜೇಯ 66 ರನ್) ಸ್ಫೋಟಕ ಬ್ಯಾಟಿಂಗ್ ತೋರಿ ಗೆಲುವಿನ ವಿಶ್ವಾಸ ಮೂಡಿಸಿದರಾದರು, ಇವರ ಹೋರಾಟ ವ್ಯರ್ಥವಾಯಿತು. ಚೆನ್ನೈ ಪರ ದೀಪಕ್ ಚಹರ್ 4 ವಿಕೆಟ್, ಲುಂಗಿ ಗಿಡಿ 3 ವಿಕೆಟ್ ಹಾಗೂ ಸ್ಯಾಮ್ ಕರ್ರನ್ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಚೆನ್ನೈ ತಂಡವು 3 ವಿಕೆಟ್ ನಷ್ಟಕ್ಕೆ 220 ರನ್ ಗಳ ಬೃಹತ್ ಮೊತ್ತ ದಾಖಲಿಸಿತು. ತಂಡದ ಪರ ಫಫ್ ಡು ಪ್ಲೆಸಿಸ್ ಅಜೇಯ 95 ರನ್, ಋತುರಾಜ್ ಗಾಯಕ್ವಾಡ್ 64 ರನ್, ಮೊಯೀನ್ ಅಲಿ 25 ರನ್, ನಾಯಕ ಎಂ.ಎಸ್. ಧೋನಿ 17 ರನ್ ಹಾಗೂ ರವೀಂದ್ರ ಜಡೇಜಾ ಅಜೇಯ 6 ರನ್ ಗಳಿಸಿದರು. ಕೆಕೆಆರ್ ಪರ ಚಕ್ರವರ್ತಿ, ರಸೆಲ್ ಹಾಗು ಸುನಿಲ್ ನರೇಂದ್ರ ತಲಾ 1 ವಿಕೆಟ್ ಪಡೆದರು.

Advertisement

ಚೆನ್ನೈ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಫಾಫ್ ಡುಪ್ಲೆಸಿಸ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement