ಮಹಿಳೆಯ ದುಪ್ಪಟ್ಟಾ ಎಳೆದು ಗದರಿಸಿದ್ದು ನೆನಪಿದೆಯಾ?: ಸಿದ್ದುಗೆ ರಾಜ್ಯ ಬಿಜೆಪಿ ಗುದ್ದು

ಬೆಂಗಳೂರು: ಸಚಿವ ಸುಧಾಕರ್ ಶಾಸಕರ ‘ಶೀಲ’ ಶಂಕಿಸುವ ಹೇಳಿಕೆ ವಿವಾದ ಸೃಷ್ಟಿಯಾದ ಬೆನ್ನಲ್ಲೇ ರಾಜ್ಯ ಬಿಜೆಪಿ ಸಿದ್ಧರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ‘ತಾವು ಭಾರಿ ಸೊಬಗನಂತೆ…

siddaramaiah-vijayaprabha-news

ಬೆಂಗಳೂರು: ಸಚಿವ ಸುಧಾಕರ್ ಶಾಸಕರ ‘ಶೀಲ’ ಶಂಕಿಸುವ ಹೇಳಿಕೆ ವಿವಾದ ಸೃಷ್ಟಿಯಾದ ಬೆನ್ನಲ್ಲೇ ರಾಜ್ಯ ಬಿಜೆಪಿ ಸಿದ್ಧರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ‘ತಾವು ಭಾರಿ ಸೊಬಗನಂತೆ ನಟಿಸಬೇಡಿ. ಮಹಿಳೆಯರ ಮೇಲೆ ನೀವು ತೋರಿಸಿದ ಗೌರವವನ್ನು ರಾಜ್ಯದ ಜನತೆ ಸಾಕಷ್ಟು ಬಾರಿ ನೋಡಿದ್ದಾರೆ ಎಂದು ಹೇಳಿದ್ದು, ಪುತ್ರನ ಮೇಲೆ ದೂರು ಹೇಳಿದ್ದಕ್ಕೆ ಮಹಿಳೆಯ ದುಪ್ಪಟ್ಟಾ ಎಳೆದು ಆಕೆಯನ್ನು ಗದರಿಸಿದ್ದು ಮರೆತು ಹೋಯಿತೇ? ಸಮಸ್ಯೆ ತೋಡಿಕೊಂಡ ಮಹಿಳೆ ಮೇಲೆ ಬಾದಾಮಿಯಲ್ಲಿ ಗರಂ ಆಗಿದ್ದು ಮರೆತು ಹೋಯಿತೇ?’ ಎಂದು ಸಿದ್ದರಾಮಯ್ಯ ಅವರು ಮಹಿಳೆಯ ಸೀರಿಗೆ ಕೈ ಹಾಕಿದ ಫೋಟೋ ಅಪ್ಲೋಡ್ ಮಾಡಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.