ಬಳ್ಳಾರಿಯ ಮತ್ತಿಬ್ಬರಿಗೆ ದಕ್ಷಿಣ ಆಫ್ರಿಕಾ ಕರೊನಾ ವೈರಸ್‌ ಪತ್ತೆ

ಬಳ್ಳಾರಿ: ರಾಜ್ಯದ ಮತ್ತಿಬ್ಬರಿಗೆ ದಕ್ಷಿಣ ಆಫ್ರಿಕಾದ ಕೊರೋನಾ ವೈರಸ್ ತಗುಲಿದೆ ಎಂದು ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜನಾರ್ಧನ್ ಅವರು ಇಂದು ಮಾಹಿತಿ ನೀಡಿದ್ದಾರೆ. ಹೌದು ವಿದೇಶದಿಂದ ಬಂದಿದ್ದ ಒಂದೇ ಕುಟುಂಬದ ಅಣ್ಣ, ತಂಗಿಗೆ ಸೋಂಕು…

Bellary corona virus

ಬಳ್ಳಾರಿ: ರಾಜ್ಯದ ಮತ್ತಿಬ್ಬರಿಗೆ ದಕ್ಷಿಣ ಆಫ್ರಿಕಾದ ಕೊರೋನಾ ವೈರಸ್ ತಗುಲಿದೆ ಎಂದು ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜನಾರ್ಧನ್ ಅವರು ಇಂದು ಮಾಹಿತಿ ನೀಡಿದ್ದಾರೆ.

ಹೌದು ವಿದೇಶದಿಂದ ಬಂದಿದ್ದ ಒಂದೇ ಕುಟುಂಬದ ಅಣ್ಣ, ತಂಗಿಗೆ ಸೋಂಕು ತಗುಲಿದ್ದು, ಇಬ್ಬರೂ ಬಳ್ಳಾರಿ ಮೂಲದವರಾಗಿದ್ದು, ದುಬೈನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಿಗೆ ಕೋವಿಡ್ ಟೆಸ್ಟ್ ಮಾಡಿಸಿದ್ದು, ಪಾಸಿಟಿವ್‌ ಬಂದ ಕಾರಣ ಮತ್ತೊಮ್ಮೆ ಟೆಸ್ಟ್‌ ಮಾಡಿಸಲಾಗಿದ್ದು, ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ಕರೊನಾ ವೈರಸ್‌ ಮಾದರಿ ಪತ್ತೆಯಾಗಿದೆ.

ಸದ್ಯ ಇಬ್ಬರಿಗೂ ಚಿಚಿಕಿತ್ಸೆ ನೀಡಿ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಸೋಂಕಿತರ ತಂದೆ ಹಾಗೂ ತಾಯಿಯ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ ಎಂದು ತಿಳಿಸಿದರು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.