ಬೆಂಗಳೂರು: ಕರೋನ ವೈರಸ್ ನಿಂದ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಸಾಮಾನ್ಯ ಜನರಿಗೆ ಹೊಡೆತದ, ಮೇಲೆ ಹೊಡೆತ ಬೀಳುತ್ತಿದೆ. ಒಂದೆಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ಬೆಲೆ ದೇಶದಲ್ಲಿ ಶತಕ ಗಡಿ ತಲುಪಿದ್ದು, ಇದು ಸಾಮಾನ್ಯ ಜನರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಜನರು ವಾಹನಗಳನ್ನು ಹೊರಗೆ ತೆಗೆಯದೆ ಆಟೋಗಳಲ್ಲಿ ಶೇರ್ ಮಾಡಿ ಪ್ರಯಾಣಿಸುತ್ತಿರುವುದು ಕಂಡುಬರುತ್ತಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬದಿಗಿಟ್ಟು ನೋಡಿದರೆ, ಗ್ಯಾಸ್ ಸಿಲಿಂಡರ್ ಬೆಲೆಯೂ ಕೂಡ ಏರಿಕೆಯಾಗುತ್ತಿದೆ. ಲಾಕ್ ಡೌನ್ ನಂತರ, ಎಲ್ಪಿಜಿ ಸಿಲಿಂಡರ್ ಬೆಲೆ 250 ರೂ. ಏರಿಕೆಯಾಗಿದೆ. ಈ ತಿಂಗಳು ಈಗಾಗಲೇ ಎರಡು ಬಾರಿ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಇದು ಮತ್ತೆ ಮಧ್ಯಮ ವರ್ಗದ ಮೇಲೆ ಭಾರಿ ಪರಿಣಾಮ ಬೀರಿದೆ.
ಕೋವಿಡ್ 19 ಹೊಡೆತದಿಂದಾಗಿ ಉದ್ಯೋಗ ಕಳೆದುಕೊಂಡವರು ಮತ್ತು ಆದಾಯ ಕಡಿಮೆಯಾದವರು ಈ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಬೆಲೆಗಳ ಏರಿಕೆ ಇಲ್ಲಿಗೆ ಮುಗಿದಂತೆ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಹಾಲಿನ ಬೆಲೆಯೂ ಸಹ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾರಿಗೆ ವೆಚ್ಚಗಳು ಹೆಚ್ಚಾದಂತೆ, ಡೈರಿಗಳ ಮೇಲಿನ ಆರ್ಥಿಕ ಒತ್ತಡವೂ ಹೆಚ್ಚಾಗುತ್ತಿದೆ. ಇದರೊಂದಿಗೆ, ಡೈರಿಗಳು ಹಾಲಿನ ಬೆಲೆಯನ್ನು ಹೆಚ್ಚಿಸಲು ಯೋಚಿಸುತ್ತಿವೆ ಎನ್ನಲಾಗಿದೆ. ಇನ್ನು ತರಕಾರಿ ಬೆಲೆಯೂ ಸಹ ಏರಿಕೆಯಾಗುವ ಸಾಧ್ಯತೆಯಿದ್ದು, ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಯಂತಹ ಅನೇಕ ತರಕಾರಿಗಳ ಬೆಲೆಗಳು ಕಳೆದ ವಾರಕ್ಕೆ ಹೋಲಿಸಿದರೆ ಈಗ ಬೆಲೆ ಹೆಚ್ಚಾಗಿದೆ. ಇವುಗಳಲ್ಲದೆ, ಅಡುಗೆ ತೈಲ ಬೆಲೆ ಕೂಡ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದ್ದು, ಒಂದು ಲೀಟರ್ ಎಣ್ಣೆ 130 ರೂ. ಇದ್ದು, ಸೂರ್ಯಕಾಂತಿ ಎಣ್ಣೆಯ ಬೆಲೆ 150 ರೂ ಇದೆ.
ಇದನ್ನು ಓದಿ: ಮಹತ್ವದ ಘೋಷಣೆ: ಬಿಪಿಎಲ್ ಕಾರ್ಡ್ ಹೊಂದಿರುವ 20 ಲಕ್ಷ ಕುಟುಂಬಗಳಿಗೆ ಉಚಿತ ಇಂಟರ್ನೆಟ್