ಚಾಲನಾ ಪರವಾನಿಗೆ (Driving license) ಬೆಗ್ಗೆ ಎಲ್ಲರಿಗು ತಿಳಿದ ವಿಷಯ. ವಾಹನ ಚಲನೆಗೆ ಮಾಡುವುದಕ್ಕೆ ಚಾಲನಾ ಪರವಾನಿಗೆ (Driving license) ನೀಡುತ್ತಾರೆ . 18 ವರ್ಷಕ್ಕಿಂತ ಮೇಲ್ಪಟ್ಟವರು ಚಾಲನಾ ಪರವಾನಿಗೆ (Driving license) ಪಡೆಯಬಹುದು. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್, ಮತದಾರರ ಕಾರ್ಡ್ನಂತೆ ಚಾಲನಾ ಪರವಾನಿಗೆ ಕೂಡ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ.
ಇತ್ತೀಚಿಗೆ ಬ್ಯಾಂಕ್, ರೇಷನ್ ಕಾರ್ಡ್, ಪಾನ್ ಕಾರ್ಡ್ ಗಳ ಜೊತೆ ಅದರ್ ಕಾರ್ಡ್ ಲಿಂಕ್ ಮಾಡುತ್ತಿದ್ದು, ಚಾಲನಾ ಪರವಾನಿಗೆ ಕೂಡ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು.
ಚಾಲನಾ ಪರವಾನಿಗೆ (DL) ಕೂಡ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ
* ಆಧಾರ್ ಕಾರ್ಡ್ ಜೊತೆ DL ಲಿಂಕ್ ಮಾಡಲು ಮೊದಲು sarathi.parivahan.gov.in ವೆಬ್‌ಸೈಟ್‌ಗೆ ಹೋಗಬೇಕು.
* ನಂತರ ಪರವಾನಗಿ ( license) ಹೊಂದಿರುವ ರಾಜ್ಯವನ್ನು ಆಯ್ಕೆ ಮಾಡಬೇಕು.
* ನಂತರ ಡ್ರೈವಿಂಗ್ ಲೈಸೆನ್ಸ್ ನವೀಕರಣ / ನಕಲು ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ರಾಜ್ಯದ ವಿವರಗಳನ್ನು ಭರ್ತಿ ಮಾಡಬೇಕು.
* ಚಾಲನಾ ಪರವಾನಗಿ ಸಂಖ್ಯೆಯನ್ನು ನಮೂದಿಸಿ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಬೇಕು.
* 12 ಅಂಕೆ ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ನಂತರ ಸಲ್ಲಿಸ (submit)ಬೇಕು.
* ಈಗ ನೋಂದಾಯಿತ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಬೇಕು.
ಇದನ್ನು ಓದಿ: ನಿಮ್ಮ ವೋಟರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ ಮತ್ತು ಫೋಟೋ ತಪ್ಪಿದೆಯೇ? ಮನೆಯಿಂದಲೇ ಈ ರೀತಿ ಬದಲಾಯಿಸಿಕೊಳ್ಳಿ!