ಬೆಳಗ್ಗೆ ಎದ್ದ ತಕ್ಷಣ ಈ ತಪ್ಪುಗಳನ್ನು ಮಾಡಬಾರದು:
* ಬೆಳಗ್ಗೆ ಎಚ್ಚರ ಆದ ಮೇಲೆ ಮತ್ತೆ ಮಲಗುವುದು ಒಳ್ಳೆಯದಲ್ಲ.
* ಬೆಳಗ್ಗಿನ ಹೊತ್ತಿನಲ್ಲಿ ಎಂದಿಗೂ ಕತ್ತಲ ರೂಮಿನಲ್ಲಿರಬಾರದು. ಬೆಳಗ್ಗಿನ ಹೊತ್ತು ನಿಮ್ಮನ್ನು ನೀವು ಬೆಳಕಿಗೆ ಒಡ್ಡಿಕೊಳ್ಳಬೇಕು.
* ರಾತ್ರಿ ಲೇಟಾಗಿ ಮಲಗಿದ್ರೂ ಕೂಡಾ ಬೆಳಗ್ಗೆ ನಿಶ್ಚಿತ ಸಮಯಕ್ಕೆ ಏಳಲೇಬೇಕು.
* ಎಚ್ಚರವಾದ ತಕ್ಷಣ ಬೆಡ್ನಿಂದ ಎದ್ದು ನಿಂತುಕೊಳ್ಳುವ ಪ್ರಯತ್ನ ಮಾಡಲು ಹೋಗಬೇಡಿ. ಇದರಿಂದ ರಕ್ತದ ಚಲನೆ ಪಾದಗಳತ್ತ ಕುಸಿದು, ಬಿಪಿ ಲೋ ಆಗಿಬಿಡಬಹುದು.
* ಬೆಳಗ್ಗೆ ಎದ್ದಾಕ್ಷಣ ಕಾಫಿ ಕುಡಿಯುವುದು ಸರಿಯಲ್ಲ.
* ಬ್ರಶ್ ಮಾಡುವ ಮೊದಲೇ ಕಾಫಿ / ಟೀ ಕುಡಿಯಬೇಡಿ. ಕಾಫಿ ಕುಡಿದ ತಕ್ಷಣ ಹಲ್ಲುಜ್ಜಿದರೆ ಹಲ್ಲು, ಒಸಡಿಗೆ ಹಾನಿಯಾಗುತ್ತದೆ.
* ಎದ್ದ ಕೂಡಲೇ ಸ್ಮಾರ್ಟ್ಫೋನ್, ಲ್ಯಾಪ್ಟ್ಯಾಪ್ ನೋಡಬೇಡಿ. ಇದರಿಂದ ಮಾನಸಿಕವಾಗಿ ಸ್ಟ್ರೆಸ್ ಶುರುವಾಗುತ್ತದೆ.
* ಬೆಳಗ್ಗೆ ಎದ್ದು ಸಿಹಿ ವಸ್ತುಗಳನ್ನು ತಿನ್ನಬೇಡಿ. ಇದರಿಂದ ಬೇಗ ಹಸಿವಾಗಲು ಶುರುವಾಗುತ್ತದೆ.
* ಬೆಳಗ್ಗೆದ್ದು ಯಾರ ಜೊತೆಗೂ ಜಗಳ ಮಾಡಬೇಡಿ. ಇದರಿಂದ ಸ್ಟ್ರೆಸ್ ಹೆಚ್ಚುತ್ತದೆ.
* ಯಾವುದೇ ಕಾರಣಕ್ಕೂ ವರ್ಕೌಟ್ ಮಾಡುವುದನ್ನು ತಪ್ಪಿಸಬೇಡಿ.
ಇದನ್ನು ಓದಿ: ಲಿಂಬೆ ಸಿಪ್ಪೆಯ ಪ್ರಯೋಜನಗಳು; ಈ ಕಾರಣಕ್ಕಾಗಿ ನಿಂಬೆಯಿಂದ ದೂರವಿರಿ