ವಿವೇಚನಾನುಸರಿ ಹೊಣೆಗಳು:
1. ಪಂಚಾಯಿತಿ ಪ್ರದೇಶದ ಅಭಿವೃದ್ದಿಗಾಗಿ ವಾರ್ಷಿಕ ಯೋಜನೆಯನ್ನು ಸಿದ್ದಪಡಿಸುವುದು ಮತ್ತು ವಾರ್ಷಿಕ ಆಯವ್ಯಯ ಪತ್ರವನ್ನು ಸಿದ್ದಪಡಿಸುವುದು
2. ಕೃಷಿ ತೋಟಗಾರಿಕೆ ಮತ್ತು ರೇಷ್ಮೆ ಕೃಷಿ ಸಂಬಂಧಪಟ್ಟ ಹಾಗೆ ಬೀಜ, ಗೊಬ್ಬರ, ನೀರು ಇತ್ಯಾದಿಗಳ ಬಗ್ಗೆ ಯೋಚಿಸುವುದು
3. ಸಣ್ಣ ನೀರಾವರಿ ಸಂಬಂಧಪಟ್ಟಂತೆ ೧೦ ಹೆಕ್ಟೇರ್ ಒಳಗಿನ ಪ್ರದೇಶಗಳಲ್ಲಿ ಸಣ್ಣ ನೀರಾವರಿ ಯೋಜನೆಯನ್ನು ಸಿದ್ಧಪಡಿಸಸಬೇಕು, ನವೀಕರಿಸಬೇಕು ಮತ್ತು ನಿರ್ವಹಿಸಬೇಕು
4. ಪಶು ಸಂಗೋಪನೆ, ಹೈನುಗಾರಿಕೆ, ಕೋಳಿಸಾಕಾಣಿಕೆ ಮತ್ತು ಮೀನುಗಾರಿಕೆ ಸಂಬಂಧಪಟ್ಟ ಹಾಗೆ ಫಾರ್ಮ್ ಗಳನ್ನೂ ಅಭಿವೃದ್ಧಿ ಪಡಿಸಬೇಕು.
5. ಸಾಮಾಜಿಕ ಅರಣ್ಯ: ಬಂಜರು ಭೂಮಿಯನ್ನು ಅರಣ್ಯ ಕರಣಗೊಳಿಸಬೇಕು, ಸಾಮಾಜಿಕ ಅರಣ್ಯ, ಕೃಷಿ ಅರಣ್ಯಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಉತ್ತೇಜನವನ್ನು ನೀಡಬೇಕು
6. ಪ್ರವಾಸೋದ್ಯಮ: ಗ್ರಾಮ ಪಂಚಾಯಿತಿ ಪ್ರದೇಶಗಳಲ್ಲಿ ಪ್ರವಾಸಿ ತಾಣಗಳನ್ನ ಗುರುತಿಸಬೇಕು ಮತ್ತು ಅವುಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಪ್ರಸ್ತಾವನೆಯನ್ನ ಸಲ್ಲಿಸಬೇಕು.
7. ಸಣ್ಣ ಪ್ರಮಾಣದ ಕೈಗಾರಿಕೆಗಳು, ಗ್ರಾಮೀಣ ಕೈಗಾರಿಕೆಗಳು, ಖಾದಿ, ಕರಕುಶಲ ಕಲೆ, ಗ್ರಾಮೋದ್ಯೋಗ ಹಾಗು ಆಹಾರ ಸಂಸ್ಕರಣಾ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಒತ್ತು ಕೊಡಬೇಕು
8. ಗ್ರಾಮೀಣ ವಸತಿ: ವಸತಿ ರಹಿತ ಮತ್ತು ನಿವೇಶನ ರಹಿತ ಜನರನ್ನ ಹಾಗು ವಲಸೆ ಕಾರ್ಮಿಕರನ್ನು ಗುರುತಿಸಿ ಅವರಿಗೆ ವಸತಿ ಸೌಲಭ್ಯವನ್ನು ಕಲ್ಪಿಸುವುದಕ್ಕೆ ಕೆಲಸವನ್ನು ಮಾಡಬೇಕು
9. ಕುಡಿಯುವ ನೀರು ಪೂರೈಕೆ: ನೀರಿನ ಗುಣಮಟ್ಟ ಮತ್ತು ಅದರ ವ್ಯಾಪ್ತಿ ಕುರಿತು ಅಗತ್ಯ ದತ್ತಾಂಶ ಮಾಹಿತಿ ಸಂಗ್ರಹಿಸಬೇಕು ಹಾಗು ಆ ಕುರಿತು ಯೋಜನೆಯನ್ನು ಸಿದ್ಧಪಡಿಸಬೇಕು.
10. ಪಟ್ಟಣ ಮತ್ತು ಗ್ರಾಮಾಂತರ ಯೋಜನೆಗಳು ಮತ್ತು ಲೋಕೋಪಯೋಗಿ ಕಾಮಗಾರಿಗಳು : ಇದರಲ್ಲಿ ಗ್ರಾಮದೊಳಗಿನ ರಸ್ತೆಗಳ ಬಗ್ಗೆ ಯೋಜನೆಯನ್ನು ಸಿದ್ದಪಡಿಸುವುದು ಮತ್ತು ರಸ್ತೆಗಳನ್ನು ಮಾಡುವುದು. ತಂಗುದಾಣ, ವಾಹನ ನಿಲುಗಡೆ, ಮೈದಾನ, ಸ್ಮಶಾನ ಭೂಮಿ, ಸಮಾಧಿ ಭೂಮಿ ನಿರ್ಮಿಸುವುದು ಮತ್ತು ನಿರ್ವಹಿಸುವುದು.
11. ವಿದ್ಯುತ್ ಮತ್ತು ಇಂಧನ : ಸಾರ್ವಜನಿಕ ಬೀದಿಗಳು ಮತ್ತು ಸ್ಥಳಗಲ್ಲಿ ಬೀದಿ ದೀಪಗಳನ್ನು ಅಳವಡಿಸವುವುದು ಮತ್ತು ನಿರ್ವಹಿಸುವುದು. ಗ್ರಾಮಪಂಚಾಯಿತಿ ನಿಧಿಯಿಂದ ಚಾವಣಿ ಮೇಲಿನ ಸೌರತಟ್ಟೆ (ಸೋಲಾರ್ ಪ್ಯಾನಲ್) ಅಳವಡಿಕೆ ಒಳಗೊಂಡಂತೆ ಸೌರವಿದ್ಯುತ್, ಜೈವಿಕ ಅನಿಲ, ಗಾಳಿ ಯಂತ್ರ, ಕಿರು ವಿದ್ಯುತ್ ಯಂತ್ರ, ಜಲಸ್ಥಾವರಗಳಂತಹ ಸಣ್ಣ ಸಾಂಪ್ರದಾಯಕ ಮತ್ತು ಅಸಂಪ್ರದಾಯಕ ಇಂಧನ ಘಟಕಗಳ ಕುರಿತು ಯೋಜನೆ ಸಿದ್ದಪಡಿಸುವುದು ಮತ್ತು ಅನುಷ್ಠಾನಕ್ಕೆ ತರುವುದು.
12. ಬಡತನ ನಿರ್ಮೂಲನೆ : ಬಡವರನ್ನ ಗುರುತಿಸುವುದು ಮತ್ತು ಬಡತನ ನಿರ್ಮೂಲನ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು
13. ಸಾರ್ವಜನಿಕ ವಿತರಣಾ ವ್ಯವಸ್ಥೆ : ಆಹಾರ ದಾನ್ಯಗಳು ಮತ್ತು ಇತರ ದೈನಂದಿನ ಅವಶ್ಯಕ ವಿತರಣೆಗಳನ್ನ ನಿರ್ವಹಿಸುವುದು. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೇಲ್ವಿಚಾರಣೆ ಮಾಡುವುದು ಮತ್ತು ಆ ಬಗ್ಗೆ ಅರಿವು ಮೂಡುಸುವುದು ಗ್ರಾಮ ಪಂಚಾಯಿತಿ ನಿದಿಗಳಿಂದ ಗೋದಾಮುಗಳನ್ನು ಮತ್ತೆ ಗ್ರಾಮೀಣ ದಾಸ್ತಾನು ಮಳಿಗೆಗಳನ್ನು ನಿರ್ಮಿಸುವುದು ಮತ್ತು ನಿರ್ವಹಿಸುವುದು.
14. ವಿಪತ್ತು ನಿರ್ವಹಣೆ: ವಿಪತ್ತು ಪೀಡಿತ ಸ್ಥಳಗಳನ್ನು ಗುರುತಿಸಲು ಸಮೀಕ್ಷೆ ನಡೆಸುವುದು ಮತ್ತು ನಿರ್ವಹಣಾ ಸೌಲಭ್ಯಗಳನ್ನ ಸೃಷ್ಟಿಸಲು ಮತ್ತು ನಿರ್ವಹಿಸಲು ವಿಪತ್ತು ನಿರ್ವಹಣೆಯಲ್ಲಿ ಸ್ಥಳೀಯ ಮತ್ತು ಹೊರಗಿನ ತಜ್ನರನ್ನ ಗುರುತಿಸುವುದು ಗ್ರಾಮಪಂಚಾಯಿತಿಯ ಸ್ವಂತ ನಿಧಿಯಿಂದ ಮತ್ತು ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ವಿಪತ್ತುಗಳಿಂದ ಸಂತ್ರಸ್ತ ವ್ಯಕ್ತಿಗಳಿಗೆ ಪರಿಹಾರ ನೀಡುವುದು.
15. ಶಿಕ್ಷಣ: ಪಂಚಾಯಿತಿ ಮಟ್ಟದಲ್ಲಿ ಸಂಪ್ರದಾಯಕ ಮತ್ತು ಸಾಂಪ್ರದಾಯಕವಲ್ಲದ ನೀತಿಯ ಶಿಕ್ಷಣ ನೀಡುವ ಕುರಿತು ಯೋಜನೆ ರೂಪಿಸುವುದು ಮತ್ತು ಅದರ ಮೇಲ್ವಿಚಾರಣೆಯನ್ನು ನಡೆಸುವುದು.
16. ಗ್ರಂಥಾಲಯ: ಗ್ರಾಮಪಂಚಾಯಿತಿ ಮಟ್ಟದ ಗ್ರಂಥಾಲಯಗಳನ್ನೂ ಮತ್ತು ವಾಚನಾಲಯಗಳನ್ನು ನಿರ್ವಹಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು
17. ಕ್ರೀಡೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳು: ಆಟದ ಮೈದಾನ ನಿರ್ಮಾಣ ಮತ್ತು ನಿರ್ವಹಣೆ. ಅಷ್ಟೇ ಅಲ್ಲದೆ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗುರುತಿಸುವದು ಗ್ರಾಮಪಂಚಾಯಿತಿ ಮಟ್ಟದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನ ಸಂರಕ್ಷಿಸುವುದು ಮತ್ತು ಪುನರಜೀವನಗೊಳಿಸುವುದು.
18) ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು ಮತ್ತು ದನಗಳ ಜಾತ್ರೆ ಒಳಗೊಂಡಂತೆ ಜಾತ್ರೆಗಳನ್ನು, ಉತ್ಸವಗಳನ್ನು ನಿಯಂತ್ರಿಸವುದು ಮತ್ತು ನಡೆಸುವುದು.
19) ಸಾರ್ವಜನಿ ಅರೋಗ್ಯ : ಗ್ರಾಮಪಂಚಾಯಿತಿ ಮಟ್ಟದಲ್ಲಿ ಅಲೋಪಥಿಕ್, ಆಯುರ್ವೇದ, ಸಿದ್ದಾ, ಯುನಾನಿ ಮತ್ತು ಪ್ರಕೃತಿ ಚಿಕಿತ್ಸೆ ಹಾಗು ಯೋಗದಂತಹ ಭಾರತೀಯ ವೈದ್ಯ ಪದ್ದತಿಗಳ ಅರೋಗ್ಯ ಸೌಲಭ್ಯಗಳ ಮೇಲ್ವಿಚಾರಣೆ ಮಾಡುವುದು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರೋಗ್ಯ ಉಪಕೇಂದ್ರಗಳ ಸ್ಥಾಪನೆಗಾಗಿ ಸಂಬಂದಿತ ಪ್ರಾಧಿಕಾರಗಳಿಗೆ ಪ್ರಸ್ತಾವನೆಯನ್ನ ಸಲ್ಲಿಸುವುದು.
20) ನೈರ್ಮಲ್ಯ : ಸಾರ್ವಜನಿಕ ರಸ್ತೆ , ಚರಂಡಿ, ಸ್ನಾನಘಟ್ಟದ ಕೊಳಗಳು, ಬಾವಿಗಳು ಹೀಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು ಮತ್ತು ಸಂರಕ್ಷಿಸುವುದು
21) ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಶೇಷವಾಗಿ ವಿಕಲಚೇತನರು ಮತ್ತು ಮಾನಸಿಕ ಸವಾಲುಗಳು ಉಳ್ಳವರ ಕಲ್ಯಾಣ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆಯಲ್ಲಿ ಪಾಲ್ಗೊಳ್ಳುವುದು. ಶಾಲಾ ಮಕ್ಕಳಿಗಾಗಿ ಅರೋಗ್ಯ ಮತ್ತು ಪೋಷಕ ಅರೋಗ್ಯ ಕಾರ್ಯಕ್ರಮಗಳ ಯೋಜನಯನ್ನು ಸಿದ್ದಪಡಿಸಿ ಕಾರ್ಯದ ಮತ್ತು ಅದರ ಅನುಷ್ಠಾನದ ಮೇಲ್ವಿಚಾರಣೆಯನ್ನು ನಡೆಸುವುದು .
22)ಸ್ವಂತ ಸಂಪನ್ಮೂಲಗಳಿಂದ ಅನುಸೂಚಿತ ಜಾತಿಗಳು, ಅನುಸೂಚಿತ ಪಂಗಡಗಳು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವನ್ನು ನೀಡುವುದು
23) ಜಾನುವಾರು ಸಾಕಾಣಿಕೆ ಕೇಂದ್ರ, ಸಮುದಾಯ ಜಾನುವಾರು ಕೊಟ್ಟಿಗೆಗಳು, ದನದ ದೊಡ್ಡಿಗಳನ್ನ ನಿರ್ಮಿಸುವುದು ಮತ್ತು ನಿರ್ವಹಿಸುವುದು
24) ಪ್ರಮಾಣ ಪತ್ರಗಳು: ಗಣಿ ಮತ್ತು ಭೂ ವಿಜ್ಞಾನ, ವಿದ್ಯುತೀಕರಣ, ಅಬಕಾರಿ, ಜೀವ ವೈವಿಧ್ಯ, ಭೂಪರಿವರ್ತನೆ ಹೀಗೆ ಮುಂತಾದ ಪ್ರಮಾಣ ಪತ್ರಗಳನ್ನು ನೀಡುವುದು
25) ಅಂಕಿ ಅಂಶ ನಿರ್ವಹಣೆ : ಗ್ರಾಮಕ್ಕೆ ಸಂಬಂದಿಸಿದ ಎಲ್ಲ ಅಂಕಿ ಅಂಶಗಳನ್ನು ಸಂಗ್ರಹಿಸುವುದು, ಕೋಷ್ಟಕ ಸಿದ್ದಪಡಿಸುವುದು ಮತ್ತು ಧಾಖಲಿಸುವುದು.
26) ಯೋಜನೆ: ದೂರದೃಷ್ಟಿಯ ಜನಯೋಜನೆ ಮತ್ತು ವಾರ್ಷಿಕ ಯೋಜನೆಗಳನ್ನು ಸಿದ್ದಪಡಿಸುವುದಕ್ಕಾಗಿ ತಾಂತ್ರಿಕ ಮತ್ತಿ ವಿವಿಧ ವಿಷಯ ತಜ್ಞರ ತಂಡವನ್ನು ರಚಿಸುವುದು
27) ಸಹಕಾರ : ಸಹಕಾರ ಚಟುಚಟಿಕೆಗಳನ್ನು ಜನಪ್ರಿಯಗೊಳಿಸುವುದು ಮತ್ತೆ ಬಲಪಡಿಸಲು ಕಾರ್ಯಕ್ರಮಗಳನ್ನು ಸಿದ್ದಪಡಿಸುವುದು ಮತ್ತು ಅನುಷ್ಠಾನಗೊಳಿಸುವುದು.
28) ಗ್ರಾಮೀಣ ಪರಿಸರ ವ್ಯವಸ್ಥೆ ಮತ್ತು ಜೀವಿ ಪರಿಸ್ಥಿತಿಯನ್ನು ರಾಷ್ಟೀಯ ಮತ್ತು ರಾಜ್ಯ ನೀತಿಗನುಗುಣವಾಗಿ ಕಾಪಾಡುವುದು ಮತ್ತು ಸಂರಕ್ಷಿಸುವದಕ್ಕಾಗಿ ಯೋಜನೆಯನ್ನು ರೂಪಿಸುವುದು ಮತ್ತು ಅದನ್ನು ಅನುಷ್ಠಾನಗೊಳಿಸುವುದು.
29) ಆದಾಯ ಸೃಷ್ಟಿ ಚಟುವಟಿಕೆಗಳು : ಸ್ವಂತ ಸಂಪನ್ಮೂಲಗಳನ್ನು ಹೆಚ್ಚಿಸಲು ವಿವಿಧ ಆದಾಯ ಸೃಜಿಸುವ ಚಟುವಟಿಕೆಗಳನ್ನು ಕೈಗೊಳ್ಳುವುದು
30) ಜ್ಞಾನ ನಿರ್ವಹಣೆ : ಕುಟುಂಬಗಳ ದತ್ತಾಂಶ ಸಂಗ್ರಹ ಮತ್ತು ಸಂಕಲನ ಮತ್ತು ಡೇಟಾ ಬೇಸ್ ನಿರ್ವಹಣೆ ಮಾಡುವುದು. ಗ್ರಾಮದ ಇತಿಹಾಸ, ಸಂಕೃತಿ ಪರಂಪರೆಯನ್ನು ದಾಖಲಿಸುವುದು
31) ಸಮುದಾಯ ಸ್ವತ್ತು ನಿರ್ವಹಣೆ : ಸಮುದಾಯ ಸ್ವತ್ತುಗಳ ರಕ್ಷಣೆ, ಸಂರಕ್ಷಣೆ, ನಿರ್ವಹಣೆ, ಅಳತೆ ದಾಖಲೀಕರಣ, ಕೆರೆ ನೀರಿನ ಕಾಲುವೆಗಳು, ಕೃಷಿ ಕಿಟ್ ಗಳು, ಬಾವಿ, ಕೊಳವೆ ಬಾವಿ ಮತ್ತಿ ಇತರೆ ಬಾವಿಗಳು ಹುಲ್ಲುಗಾವಲು, ಅರಣ್ಯ ನಡುತೋಪು ಇತ್ಯಾದಿ ಕ್ರಮಬದ್ಧ ದಾಖಲೀಕರಣ ಮತ್ತು ರಕ್ಷಣೆ.
ಒಂದು ಗ್ರಾಮ ಪಂಚಾಯಿತಿ ಯಶಸ್ವಿಯಾಗಿ ನಿರ್ವಹಿಸಬೇಕೆಂದರೆ ಮೇಲಿನ ಈ ಕರ್ತವ್ಯಗಳನ್ನು ನಿಭಾಯಿಸಬೇಕು ಮತ್ತು ಈ ಯೋಜನೆಗಳನ್ನು ಅನುಷ್ಠಾನ ಮಾಡಬೇಕು. ಗ್ರಾಮಗಳನ್ನ ಆತ್ಮ ನಿರ್ಭರ ಮಾಡಬೇಕು. ಇಗೆ ಮಾಡಿದರೆ ಪ್ರತಿ ಗ್ರಾಮವು ಸ್ವಾವಲಂಬಿಯಾಗಲಿದೆ. ಮತ್ತು ಗಾಂಧೀಜಿಯ ಕನಸು ನನಸಾಗುತ್ತದೆ.
ಇದನ್ನು ಓದಿ: ಒಂದು ಗ್ರಾಮ ಪಂಚಾಯಿತಿ ಯಶಸ್ವಿಯಾಗಿ ನಿರ್ವಹಿಸಲು ಮಾಡಲೇಬೇಕಾದ ಕರ್ತವ್ಯಗಳೇನು? ಹೊಣೆಗಳೇನು? ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು