ತುಮಕೂರು: ಇಂದು ಅದೆಷ್ಟೋ ಬಡ ಮಕ್ಕಳಿಗೆ ಶಿಕ್ಷಣದ ಹಾದಿ ಹಿಡಿಸಿ, ಹಸಿವು ಮುಕ್ತ ಮಾರ್ಗ ತೋರಿಸಿದ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆ.
ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿದ್ದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಬಡ ಮತ್ತು ಅನಾಥ ಮಕ್ಕಳ ಪಾಲಿಗೆ ದಾರಿ ದೀಪವಾಗಿದ್ದರು. ಶಿವಕುಮಾರ ಸ್ವಾಮೀಜಿ ಅವರು ಸಾವಿರಾರು ಮಕ್ಕಳಿಗೆ ಯಾವುದೇ ಜಾತಿ, ಭೇದ-ಭಾವ ಇಲ್ಲದೆ ತಮ್ಮ ಸಂಸ್ಥೆಯಲ್ಲಿ ಶಿಕ್ಷಣ ಮತ್ತು ವಸತಿ ನಿಲಯವನ್ನು ಕಲ್ಪಿಸಿ ಅಕ್ಷರ ದಾಸೋಹಿಯಾಗಿದ್ದರು.
ಇಷ್ಟೆಲ್ಲಾ ಸಾಧನೆ ಮಾಡಿರುವ ಸರಳ ಯೋಗಿಗಳಾದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆಯ ಅಂಗವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸೇರಿದಂತೆ ಭಕ್ತರು ಹಾಗು ವಿವಿದ ರಂಗದ ಗಣ್ಯರು ಅವರ ಸಾಧನೆಯನ್ನು ಸ್ಮರಿಸಿ ಭಕ್ತಿ ನಮನ ಸಲ್ಲಿಸಿದ್ದಾರೆ.
ಶ್ರೀ ಡಾ.ಶಿವಕುಮಾರ ಸ್ವಾಮಿಗಳಿಗೆ ಭಕ್ತಿಪೂರ್ವ ನಮನ ಸಲ್ಲಿಸಿದ ಸಿಎಂ ಯಡಿಯೂರಪ್ಪ:
ಸಿಎಂ ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ನಾಡು ಕಂಡ ಶ್ರೇಷ್ಠ ಸಾಧಕರು, ಅನ್ನ, ಅಕ್ಷರ, ವಸತಿಗಳನ್ನು ಕೊಟ್ಟು ಸಾವಿರಾರು ಬಡಮಕ್ಕಳ ಬಾಳನ್ನು ಬೆಳಗಿದ ತ್ರಿವಿಧ ದಾಸೋಹಿ, ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮಿಗಳ ಪುಣ್ಯತಿಥಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ಸಮಾಜದ ಏಳಿಗೆಗಾಗಿ ತಮ್ಮ ಜೀವನವನ್ನೇ ಸವೆಸಿದ ಅವರ ಆದರ್ಶ ಸಾಧನೆಗಳು ನಾಡಿನ ಹಿರಿಮೆಯನ್ನು ಹೆಚ್ಚಿಸಿವೆ ಎಂದು ಶ್ರೀ ಡಾ.ಶಿವಕುಮಾರ ಸ್ವಾಮಿಗಳನ್ನು ಸ್ಮರಿಸಿದ್ದಾರೆ.
ನಾಡು ಕಂಡ ಶ್ರೇಷ್ಠ ಸಾಧಕರು, ಅನ್ನ, ಅಕ್ಷರ, ವಸತಿಗಳನ್ನು ಕೊಟ್ಟು ಸಾವಿರಾರು ಬಡಮಕ್ಕಳ ಬಾಳನ್ನು ಬೆಳಗಿದ ತ್ರಿವಿಧ ದಾಸೋಹಿ, ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮಿಗಳ ಪುಣ್ಯತಿಥಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ಸಮಾಜದ ಏಳಿಗೆಗಾಗಿ ತಮ್ಮ ಜೀವನವನ್ನೇ ಸವೆಸಿದ ಅವರ ಆದರ್ಶ ಸಾಧನೆಗಳು ನಾಡಿನ ಹಿರಿಮೆಯನ್ನು ಹೆಚ್ಚಿಸಿವೆ. pic.twitter.com/x38nYFDKTz
— B.S. Yediyurappa (@BSYBJP) January 21, 2021




