ಬೆಂಗಳೂರು : ಕರ್ನಾಟಕ ಲೋಕಸೇವಾ ಅಯೋಗವು ದಿನಾಂಕ: 23-01-2021 (ಶನಿವಾರ) ಮತ್ತು ದಿನಾಂಕ: 24-01-2021 (ಭಾನುವಾರಗಳಂದು ನಡೆಸುವ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಮತ್ತು ಕರ್ನಾಟಕ ಭವನ, ದೆಹಲಿಯ ಉಳಿಕೆ ಮೂಲ ವೃಂದದ ಮತ್ತು ಹೈದ್ರಾಬಾದ್ ಕರ್ನಾಟಕ ವೃಂದದ ಸಹಾಯಕರು /ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾಷ್ಟಕ ಪರೀಕ್ಷೆಯ ಸಂಬಂಧ “ಪ್ರವೇಶ ಪತ್ರಗಳನ್ನು Download ಮಾಡಿಕೊಳ್ಳಲು ಆಯೋಗದ ವೆಬ್ಸೈಟ್ http://kpsc.kar.nic.in ನಲ್ಲಿ ಅವಕಾಶ ಕಲ್ಪಿಸಲಾಗಿದೆ.
FDA ಹುದ್ದೆಗಳಿಗೆ ಅರ್ಜಿ ಹಾಕಿದ್ದ ಅಭ್ಯರ್ಥಿಗಳು www.kpsc.kar.nic.in ವೆಬ್ಸೈಟ್ ಗೆ ಭೇಟಿ ನೀಡಿ, ‘Click here to download admission ticket for FDA 2019 Examination’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ತಮ್ಮ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಹಾಕುವ ಮೂಲಕ ಲಾಗಿನ್ ಆಗಿ, ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ನಮೂದಿಸಲಾದ ದಿನಾಂಕಗಳಂದು ಆಯಾಯ ಪರೀಕ್ಷೆಗಳಿಗೆ ಹಾಜರಾಗಬೇಕು.
ಅಭ್ಯರ್ಥಿಗಳು ಪರೀಕ್ಷೆ ದಿನಕ್ಕಾಗಿ ಕಾಯದೇ ಮುಂಚಿತವಾಗಿಯೇ ಪ್ರವೇಶ ಪತ್ರವನ್ನು Download ಮಾಡಿಕೊಂಡು ಅದರ ಪ್ರಿಂಟ್ ತೆಗೆದುಕೊಳ್ಳತಕ್ಕದ್ದು ಮತ್ತು ಪರೀಕ್ಷಾ ಉಪಕೇಂದ್ರ ಇರುವ ಸ್ಥಳವನ್ನು ಮುಂಚಿತವಾಗಿ ಅಂದರೆ ಹಿಂದಿನ ದಿನ ಅಥವಾ ಅದಕ್ಕೂ ಮೊದಲೇ ನೋಡಿಕೊಳ್ಳತಕ್ಕದ್ದು, ಪ್ರವೇಶಪತ್ರದಲ್ಲಿ ನೀಡಿರುವ ಪರೀಕ್ಷೆಗೆ ಸಂಬಂಧಿಸಿದ ಸೂಚನೆಗಳನ್ನು ಓದಿಕೊಂಡು, ತಪ್ಪದೇ ಅವುಗಳನ್ನು ಪಾಲಿಸತಕ್ಕದ್ದು.
ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಹಾಜರುಪಡಿಸದಿದ್ದಲ್ಲಿ ಪರೀಕ್ಷೆಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ ಮತ್ತು ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಅಂಚೆ ಮೂಲಕ ಕಳುಹಿಸಿಕೊಡಲಾಗುವುದಿಲ್ಲವೆಂದು ಸಹ ಆಯೋಗವು ಈ ಮೂಲಕ ತಿಳಿಸಿದೆ.
ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ:
https://www.kpscrecruitment.in/RPS/Home.aspx