ಮದುವೆಯಾದ 18 ದಿನಗಳಲ್ಲೇ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾದ ವಧು!

ಭೋಪಾಲ್: ಆ ಯುವತಿ ಒಬ್ಬ ಯುವಕನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಹಿರಿಯರು ಆ ಯುವಕನನ್ನು ಮರೆತು ಬಿಡಬೇಕು ಎಂದು ಬೆದರಿಕೆ ಹಾಕಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿದರು. ಕುತ್ತಿಗೆಗೆ ತಾಳಿ ಕಟ್ಟಿಸಿಕೊಂಡ ಆ…

marriage vijayaprabha

ಭೋಪಾಲ್: ಆ ಯುವತಿ ಒಬ್ಬ ಯುವಕನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಹಿರಿಯರು ಆ ಯುವಕನನ್ನು ಮರೆತು ಬಿಡಬೇಕು ಎಂದು ಬೆದರಿಕೆ ಹಾಕಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿದರು. ಕುತ್ತಿಗೆಗೆ ತಾಳಿ ಕಟ್ಟಿಸಿಕೊಂಡ ಆ ಯುವತಿ ತನ್ನ ಪ್ರಿಯಕರನ ನೆನಪುಗಳನ್ನು ಮರೆಯಲಾಗದೆ, ಮದುವೆಯಾದ ಸ್ವಲ್ಪ ದಿನಗಳಲ್ಲೇ ತನ್ನ ಗಂಡನನ್ನು ಬಿಟ್ಟು ತನ್ನ ಪ್ರಿಯಕರನೊಂದಿಗೆ ಓಡಿಹೋದ ಘಟನೆ ಮಧ್ಯಪ್ರದೇಶದ ಚಟ್ಟರ್‌ಪುರದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಮೂರ್ತಿ ರಾಯ್ಕ್ವಾರ್ (20) ಕೆಲವು ದಿನಗಳಿಂದ ಬಜ್ಜು ಯಾದವ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಒಟ್ಟಿಗೆ ಬದುಕಬೇಕೆಂದು ಆಸೆ ಇಟ್ಟುಕೊಂಡಿದ್ದರು. ಆದರೆ, ಆ ಯುವತಿಯ ಪೋಷಕರು ಡಿಸೆಂಬರ್ 6 ರಂದು ಇನ್ನೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ್ದರು. ತನ್ನ ಪ್ರಿಯಕರನನ್ನು ಬಿಟ್ಟಿರಲಾರದೆ, ಇತ್ತ ಪೋಷಕರಿಗೆ ಏನೂ ಹೇಳಲು ಸಾಧ್ಯವಾಗದೆ ಆ ಯುವತಿ ವಿವಾಹ ಬಂಧನಕ್ಕೆ ಒಳಗಾದಳು. ಎಲ್ಲಾ ಕಾರ್ಯಕ್ರಮಗಳು ಮುಗಿದ ನಂತರ ಆ ಯುವತಿ 24 ನೇ ತಾರೀಖು ಕಣ್ಣುತಪ್ಪಿಸಿ ಓಡಿ ಹೋಗಿದ್ದಾಳೆ.

ಅದೇ ಸಮಯದಲ್ಲಿ, ಆಕೆಯ ಗೆಳೆಯ ಸಹ ಕಣ್ಮರೆಯಾಗಿದ್ದರಿಂದ ಇಬ್ಬರು ಒಟ್ಟಿಗೆ ಓಡಿಹೋದರು ಎಂದು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಇದರಿಂದ ಅವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ. ದೂರಿನಲ್ಲಿ, ವಧು 5 ಲಕ್ಷ ರೂಪಾಯಿ ಮತ್ತು ಬಾರಿ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ತನ್ನ ಗೆಳೆಯನೊಂದಿಗೆ ಹೋಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮತ್ತೊಂದೆಡೆ, ತನ್ನ ಹೆಂಡತಿ ಹಲವು ದಿನಗಳಿಂದ ಗಂಡನ ಮನೆಗೆ ಬಂದಿಲ್ಲ ಎಂದು ಅನುಮಾನಿಸಿದ ಮದುಮಗನು ಮಾವನ ಮನೆಗೆ ಬಂದಾಗ ನಿಜವಾದ ವಿಷಯ ತಿಳಿದು ಆಘಾತಕ್ಕೊಳಗಾಗಿದ್ದಾನೆ. ಘಟನೆಯ ಕುರಿತು ಮಿಸ್ಸಿಂಗ್ ಕೇಸ್ ದಾಖಲಿಸಿರುವ ಪೊಲೀಸರು ವಧು ಮತ್ತು ಆಕೆಯ ಪ್ರಿಯಕರನಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.