ಬೆಂಗಳೂರು: ಬೆಂಗಳೂರಿನ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರನಿಗೆ ಪ್ರತೀ ವರ್ಷದ ಸಂಕ್ರಾಂತಿಯಂದು ಸೂರ್ಯ ರಶ್ಮಿಯ ಸ್ಪರ್ಶವಾಗಿತ್ತು. ಆದರೆ ಈ ಬಾರಿ ಸೂರ್ಯ ರಶ್ಮಿ ತಾಕಿಲ್ಲ.
ಹೌದು, ನಿಗದಿತ ಕಾಲಮಾನದಂತೆ ಸಂಜೆ 5.25ರಿಂದ 27ರವರೆಗೆ ಸೂರ್ಯ ರಶ್ಮಿ ತಾಕಬೇಕಿತ್ತು. ಆದರೆ ಮೋಡ ಅಡ್ಡ ಬಂದ ಪರಿಣಾಮ ಈ ಬಾರಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ತಾಕಿಲ್ಲ. ಈ ಹಿನ್ನೆಲೆಯಲ್ಲಿ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಿದ್ಧರಾಗಿದ್ದ ನೂರಾರು ಭಕ್ತರು ನಿರಾಶೆಗೊಂಡಿದ್ದಾರೆ.
ಸೂರ್ಯ ರಶ್ಮಿ ಅಗೋಚರದ ಹಿಂದೆ ಯುದ್ಧಕಾಂಡ..!
ಇನ್ನು ಬೆಂಗಳೂರಿನ ಗವಿಪುರಂನಲ್ಲಿರುವ ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ತಾಕದ ವಿಚಾರ ಸಂಬಂಧ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಅವರು ಇಂದು ಮಾತನಾಡಿದ್ದು, ಮೋಡ ಅಡ್ಡ ಬಂದಿದ್ದರಿಂದ ಯುದ್ಧ ನಡೆಯಬಹುದು ಎಂದಿದ್ದಾರೆ.
ಈ ವೇಳೆ, ಶಿವನ ಕ್ಷೇತ್ರಗಳಲ್ಲಿ ಮೃತ್ಯುಂಜಯ ಪೂಜೆ ಮಾಡುವುದರಿಂದ ಮೋಕ್ಷ ದೊರೆಯಲಿದೆ. ಹಾಗಾಗಿ ಸ್ವಾಮಿಯ ಸನ್ನಿಧಿಯಲ್ಲಿ ಮಾಘಮಾಸದ ವೇಳೆ ಅತಿರುದ್ರ ಮಹಾಯಾಗ ಮಾಡುತ್ತೇವೆ. ಇದರಿಂದ ಭೂ ಮಂಡಲಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದ್ದಾರೆ.