ಮೆಕ್ಸಿಕೋ : ಬೇರೆ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಒಬ್ಬ ವ್ಯಕ್ತಿ, ಅವಳನ್ನು ರಹಸ್ಯವಾಗಿ ಭೇಟಿಯಾಗಲು ಯೋಜಿಸಿ, ತನ್ನ ಗೆಳತಿಯ ಮಲಗುವ ಕೋಣೆಗೆ ನೇರವಾಗಿ ಹೋಗಲು ತನ್ನ ಮನೆಯಿಂದ ಸುರಂಗವನ್ನು ಮಾರ್ಗವನ್ನು ಕೊರೆದಿದ್ದಾನೆ. ಆದರೆ, ಆಕೆಯ ಪತಿಯ ಕಣ್ಣಿಗೆ ಸುರಂಗ ಕಂಡಿದ್ದರಿಂದ ಗುಟ್ಟು ರಟ್ಟಾಗಿದೆ.
ಮೆಕ್ಸಿಕೊದ ಟಿಜುವಾನಾ ಮೂಲದ ನಿರ್ಮಾಣ ಕೆಲಸಗಾರ ಆಲ್ಬರ್ಟೊ ತನ್ನ ನೆರೆಯ ಮನೆಯ ಪಮೇಲಾಳೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದನು. ಪಮೇಲಾ ಅವರ ಪತಿ ಜಾರ್ಜ್ ಅವರು ಕೆಲಸಕ್ಕೆ ಹೋದಾಗ ಆಲ್ಬರ್ಟ್ ಸುರಂಗದ ಮೂಲಕ ಆಕೆ ಮಲಗುವ ಕೋಣೆಗೆ ಹೋಗುತ್ತಿದ್ದ. ಇದು ಕೆಲವು ದಿನಗಳವರೆಗೆ ನಡೆಯಿತು.
ಆದರೆ ಒಂದು ದಿನ ಜಾರ್ಜ್ ಆಫೀಸಿನಿಂದ ಬೇಗನೆ ಮನೆಗೆ ಬಂದು ಪಮೇಲಾ ಮತ್ತು ಆಲ್ಬರ್ಟ್‌ನನ್ನು ಲಿವಿಂಗ್ ರೂಮಿನಲ್ಲಿ ನೋಡಿದ್ದಾನೆ. ಜಾರ್ಜ್‌ನನ್ನು ನೋಡಿದ ಆಲ್ಬರ್ಟ್ ಸೋಫಾದ ಹಿಂಭಾಗಕ್ಕೆ ಹೋಗಿ, ಅಲ್ಲಿನ ಸುರಂಗದ ಮೂಲಕ ತನ್ನ ಮನೆಗೆ ಹೋಗಿದ್ದಾನೆ. ಆಲ್ಬರ್ಟ್ ಸೋಫಾದ ಹಿಂದೆ ಅಡಗಿಕೊಂಡಿರುವುದನ್ನು ನೋಡಿದ ಜಾರ್ಜ್, ಅಲ್ಲಿಗೆ ಹೋದಾಗ, ಆ ವ್ಯಕ್ತಿ ಕಾಣಿಸಲಿಲ್ಲ. ಅದರೆ ಸೋಫಾದ ಕೆಳಗೆ ಸುರಂಗ ಮಾರ್ಗವನ್ನು ನೋಡಿ ಜಾರ್ಜ್‌ಗೆ ಆಘಾತವಗಿದ್ದು. ಆ ಸುರಂಗ ಮಾರ್ಗದ ಮೂಲಕ ಹೋದಾಗ ಅದು ಆಲ್ಬರ್ಟ್ ಮನೆಯ ಒಳಭಾಗಕ್ಕೆ ಕನೆಕ್ಟ್ ಆಗಿದೆ.
ಮತ್ತೊಂದೆಡೆ ವಿವಾಹಿತನಾದ ಆಲ್ಬರ್ಟೊ ಜಾರ್ಜ್‌ನನ್ನು ತನ್ನ ಮನೆಯಿಂದ ಹೊರಹೋಗುವಂತೆ ಬೇಡಿಕೊಂಡಿದ್ದಾನೆ ಈ ಹಿನ್ನೆಲೆಯಲ್ಲಿ ಇಬ್ಬರು ಪರಸ್ಪರರ ಜಗಳವಾಡಿದ್ದರೇ. ಈ ವಿಷಯ ಕೋಸ್ಟಾ ಪೊಲೀಸರಿಗೆ ವರೆಗೂ ಹೋಯಿತು. ತನ್ನ ಹೆಂಡತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾನೆ ಎಂದು ಆಲ್ಬರ್ಟೋ ಮೇಲೆ ಜಾರ್ಜ್ ದೂರಿದ್ದಾನೆ. ಆತನ ದೂರಿನ ನಂತರ ಪೊಲೀಸರು ಆಲ್ಬರ್ಟೊನನ್ನು ಬಂಧಿಸಿದ್ದಾರೆ.