ಮಂಡ್ಯ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೇರಳೆಕೆರೆಯಲ್ಲಿ ಮಾತನಾಡಿ ಅಭಿಮಾನಿಯೊಬ್ಬರು ರಾಧಿಕಾ ಕುಮಾರಸ್ವಾಮಿ ಬಗ್ಗೆ ನೀವೇನು ಹೇಳುತ್ತೀರೆಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಎಚ್ ಡಿ ಕುಮಾರಸ್ವಾಮಿ ಅವರು, ರಾಧಿಕಾ ಯಾರೆಂದು ನನಗೆ ಗೊತ್ತಿಲ್ಲ. ಯಾರಪ್ಪ ಅವರೆಲ್ಲಾ? ಅವರು ಯಾರೋ ನನಗೆ ಗೊತ್ತಿಲ್ಲ. ನನಗೆ ಸಂಬಂಧಪಡದ ವಿಚಾರ ಕೇಳಬೇಡಿ ಎಂದಿ ಹೇಳಿದ್ದಾರೆ. ವಂಚಕ ಯುವರಾಜ್ ಅಲಿಯಾಸ್ ಸ್ವಾಮಿ ಎಂಬುವರ ಜೊತೆ ವ್ಯವಹಾರ ಸಂಬಂಧ ಹೊಂದಿರುವ ಆರೋಪ ಹಿನ್ನೆಲೆ ಸಿಸಿಬಿ ಪೊಲೀಸರು ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಕಮಿಷನ್ ಸಿಗಲ್ಲವೆಂದು ರೈತರ ಸಾಲ ಮನ್ನಾ ಮಾಡಲ್ಲ: ಹೆಚ್ಡಿಕೆ
ಇನ್ನೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಆಡಳಿತ ನೋಡಿದ್ದೀರಿ. ಅಭಿವೃದ್ಧಿ ಕೆಲಸ ಮಾಡಲು ಹಣ ಇಲ್ಲ ಎನ್ನುವ ಇವರಿಗೆ ದೋಚಲು ಹಣ ಇರುತ್ತದೆ. ಚುನಾವಣೆ ಘೋಷಣೆಯಾಗಲಿ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದ್ದಾರೆ.
ನನ್ನದು ಕಮಿಷನ್ ಸರ್ಕಾರವೆಂದು ಕರೆಯಲು ಸಾಧ್ಯವೇ? ನಾನು ಕಮಿಷನ್ ಪಡೆದಿದ್ದರೆ 1ರಿಂದ 2 ಸಾವಿರ ಕೋಟಿ ರೂ. ಮಾಡಬಹುದಿತ್ತು. ಆದರೆ 25,000 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ನಾನು ರೈತರಿಂದ ಕಮಿಷನ್ ಪಡೆದಿದ್ದೇನಾ ಎಂದರು ಎಂದು ಪ್ರಶ್ನಿಸಿದ್ದಾರೆ.