ದುಬೈ : ಬಾಲಿವುಡ್ ಸೆಲೆಬ್ರಿಟಿ ಶಿಲ್ಪಾ ಶಿರೋಡ್ಕರ್ ಅವರು ಕರೋನಾ ಲಸಿಕೆ ಪಡೆದ ಮೊಟ್ಟ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ದುಬೈನಲ್ಲಿರುವ 51 ವರ್ಷದ ಶಿಲ್ಪಾ ಅವರು ಯುಎಇಯಲ್ಲಿ ಕರೋನ ಲಸಿಕೆ ಹಾಕಿಸಿಕೊಂಡಿದ್ದಾರೆ.
ಈ ವಿಷಯವನ್ನು ಸ್ವತಃ ಶಿಲ್ಪಾ ಶಿರೋಡ್ಕರ್ ಅವರು ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಬಹಿರಂಗಪಡಿಸಿದ್ದಾಳೆ. ಈ ಸಂದರ್ಭದಲ್ಲಿ ಯುಎಇ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಶಿಲ್ಪಾ ಶಿರೋಡ್ಕರ್ ಅವರು ‘ಗೋಪಿ ಕಿಶನ್’, ‘ಬೆವಾಫಾ ಸನಮ್’, ‘ಕಿಶನ್ ಕನ್ಹಯ್ಯ’ ಮತ್ತು ‘ಹಮ್’ ಸಿನಿಮಾಗಳಿಂದ ಬಾಲಿವುಡ್ನಲ್ಲಿ ಜನಪ್ರಿಯತೇ ಪಡೆದುಕೊಂಡಿದ್ದರು.
ನಂತರ ಅವರು 2000 ರಲ್ಲಿ ಬ್ರಿಟನ್ ದೇಶಕ್ಕೆ ಸಂಬಂದಿಸಿದ ರಂಜಿತ್ ಅವರನ್ನು ವಿವಾಹವಾದರು. ಮದುವೆಯ ನಂತರ ವಿರಾಮ ತೆಗೆದುಕೊಂಡ ಶಿಲ್ಪಾ, 2013 ರಲ್ಲಿ ಜನಪ್ರಿಯ ಧಾರಾವಾಹಿ ‘ಏಕ್ ಮುತಿ ಉಸ್ಮಾನ್’ ನಲ್ಲಿ ನಟಿಸಿದ್ದರು. ಶಿಲ್ಪಾ ಶಿರೋಡ್ಕರ್ ತೆಲುಗಿನ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರ ಸಹೋದರಿಯಾಗಿದ್ದಾರೆ.
View this post on Instagram