ದೆಹಲಿ: ದೇಶದಲ್ಲಿ ಕರೋನ ಸೋಂಕು ನಿಯಂತ್ರಿಸಲು ಕೋವಿಶಿಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಜಿಐ ವಿ.ಜಿ ಸೋಮನಿ ಅವರು, ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕಾವ್ಯಾಕ್ಸಿನ್ ಅಸ್ಟ್ರಾಜೆನಿಕಾ, ಆಕ್ಸ್ ಫರ್ಡ್ ವಿವಿ ಅಭಿವೃದ್ಧಿ ಪಡಿಸಿದ ಕೋವಿಶಿಲ್ಡ್ ಈ ಎರಡು ಲಸಿಕೆಗಳನ್ನೂ ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಅನುಮತಿ ನೀಡಲಾಗಿದೆ.
ಈ ಎರಡು ಲಸಿಕೆಗಳನ್ನು ಬಳಸಿ ಹಲವು ಕ್ಲಿನಿಕಲ್ ಟ್ರಯಲ್ ನಡೆಸಲಾಗಿದ್ದು, ಈ ಲಸಿಕೆಗಳು ಬಳಸಲು ಸೂಕ್ತವಾಗಿವೆ ಎಂದು ತಜ್ಞರ ಸಮಿತಿ ಒಪ್ಪಿಗೆ ನೀಡಿದೆ ಎಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಜಿಐ ವಿ.ಜಿ ಸೋಮನಿ ಅವರು ಹೇಳಿದ್ದಾರೆ.




