ನಿಮಗೆ ಹುಳುಕಡ್ಡಿಯಾದರೆ ಹೀಗೆ ಮಾಡಿ

ಹುಳುಕಡ್ಡಿಗೆ ಮನೆ ಔಷಧಿ: 1. ಕರಿತುಳಸೀ ಸೊಪ್ಪು, ಉಪ್ಪು ಹಾಕಿ ತಿಕ್ಕಿ ಹಚ್ಚುವುದು. ಮೈಲು ತುತ್ತವನ್ನು ಸುಟ್ಟು, ಕೊಬ್ಬರಿ ಎಣ್ಣೆಯಲ್ಲಿ ತಾಮ್ರದ ಪಾತ್ರೆಗೆ ಹಾಕಿ ತಿಕ್ಕಿ, ಸುತ್ತಲೂ ಹಚ್ಚಿ, ಆಮೇಲೆ ಹುಳುಕಡ್ಡಿಗೆ ಹಚ್ಚುವುದು. ಈ…

tinea vijayaprabha

ಹುಳುಕಡ್ಡಿಗೆ ಮನೆ ಔಷಧಿ:

1. ಕರಿತುಳಸೀ ಸೊಪ್ಪು, ಉಪ್ಪು ಹಾಕಿ ತಿಕ್ಕಿ ಹಚ್ಚುವುದು. ಮೈಲು ತುತ್ತವನ್ನು ಸುಟ್ಟು, ಕೊಬ್ಬರಿ ಎಣ್ಣೆಯಲ್ಲಿ ತಾಮ್ರದ ಪಾತ್ರೆಗೆ ಹಾಕಿ ತಿಕ್ಕಿ, ಸುತ್ತಲೂ ಹಚ್ಚಿ, ಆಮೇಲೆ ಹುಳುಕಡ್ಡಿಗೆ ಹಚ್ಚುವುದು. ಈ ಔಷದಿ ಒಣ ಕಜ್ಜಿಗೆ ಮಾತ್ರ ಪರಿಣಾಮಕಾರಿ, ಹಸಿ ಕಜ್ಜಿಗೆ ಆಗುವುದಿಲ್ಲ. ವಿಷ ಮಂಗ್ರಿ ಸೊಪ್ಪು, ಸುಟ್ಟು ಕರಿ ಮಾಡಿ ಹಾಕುವುದು. ಆಕಳ ತುಪ್ಪ, ಬೇವಿನೆಣ್ಣೆ, ಗಂಧದೆಣ್ಣೆ. ಇವುಗಳನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ ಹಚ್ಚುವುದು.

2. ಕಣಗಲೆ ಹಾಲನ್ನು ಒಂದು ತಾಮ್ರದ ತಟ್ಟೆಯಲ್ಲಿ ಹಿಡಿದು ತರಬೇಕು, ಹಾಲು ಇದ್ದಷ್ಟು ಕೊಬ್ಬರಿ ಎಣ್ಣೆ ಹಾಕಿ ತಿಕ್ಕಿ ಬಿಸಿಲಲ್ಲಿ ಇಡಬೇಕು. 3-4 ದಿನದ ಬಿಸಿಲಿಗೆ ಅದು ಮುಲಾಮಿನಂತೆ ಆಗುತ್ತದೆ. ಅದನ್ನು ಹುಳುಕಡ್ಡಿಗೆ ಹಚ್ಚಬೇಕು. ಹಚ್ಚುವಾಗ ಹುಳು ಕಡ್ಡಿಯ ಸುತ್ತ ಹಚ್ಚಿ, ಮಧ್ಯಕ್ಕೆ ಆಮೇಲೆ ಹಚ್ಚಬೇಕು.

Vijayaprabha Mobile App free

3. ಬಿಳೀ ದಾಸವಾಳದ ಮೊಗ್ಗು, ಆಕಳ ಬೆಣ್ಣೆ, ಕಾಳು ಜೀರಿಗೆ ಹಾಕಿ ಅರ್ಧ ಕಾಯಿಸುವುದು. ನಂತರ ಕಜ್ಜಿಗಳಿಗೆ ಹಚ್ಚುವುದು. ಇದು ಸಾಮಾನ್ಯವಾಗಿ ಎಲ್ಲಾ ತರಹದ ಕಜ್ಜಿಗೂ ಆಗುತ್ತದೆ. ಈ ಔಷಧಿಗೆ * ಸಪ್ಪೆ ತುಪ್ಪ ” ಎಂದು ಹೆಸರು.

4. ಕಜ್ಜಿಯಾದ ಜಾಗಕ್ಕೆ ಕಟ್ಟಿ ಹಾಲು ಹಚ್ಚುವುದು. 3 ದಿನಗಳ ನಂತರ ಅದು ಸುಡುತ್ತಾ ಬರುವುದು, ಅನಂತರ ಅದಕ್ಕೆ ಕೊಬ್ಬರಿ ಎಣ್ಣೆ ಹಚ್ಚುತ್ತಾ ಬರುವುದು.

5. ದೂರ್ವೆ ಸಮೂಲ (ಬೇರುಸಹಿತ ಗಿಡ)ತಂದು ಅರಸಿನ ಹಾಕಿ ಜಜ್ಜಿ ಹಚ್ಚುವುದು.

ಇದನ್ನು ಓದಿ: ಲೋ ಬಿಪಿಗೆ ನೀವು ತಿಳಿದುಕೊಳ್ಳಲೇಬೇಕಾದ ಉತ್ತಮ ಮನೆ ಮದ್ದು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.