ವಿಜಯಪುರ : ಸಿಎಂ ಕಾರ್ಯ ವೈಖರಿ ಬಗ್ಗೆ ಯತ್ನಾಳ್ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದು ಸಿಎಂ ಕಾರ್ಯ ವೈಖರಿ ಬಗ್ಗೆ ರಾಜ್ಯ ಉಸ್ತುವಾರಿ ಅಷ್ಟೇ ಅಲ್ಲ ಅನುಮತಿ ನೀಡಿದರೆ ಕೇಂದ್ರದ ವರಿಷ್ಠರ ಮುಂದೆಯೂ ಮತ್ತು ಬಿಜೆಪಿ ರಾಷ್ಟೀಯ ಅಧ್ಯಕ್ಷರ ಮುಂದೆಯೂ ಪ್ರಸ್ತಾಪಿಸುತ್ತೇನೆ ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ
ವಿಭಾಗವಾರು ಶಾಸಕರ ಸಭೆ ಬದಲು ಶಾಸಕಾಂಗ ಪಕ್ಷದ ಸಭೆ ನಡೆಸಲು ನಾನು ಪತ್ರ ಬರೆದಿದ್ದೇನೆ. ವಿಭಾಗ ಮಟ್ಟದಲ್ಲಿ ಸಭೆ ಕರೆದ್ರೆ ಏಳೆಂಟು ಶಾಸಕರು ಇರುತ್ತಾರೆ. ಮಾತನಾಡಲು ಶಾಸಕರು ಭಯಪಡುತ್ತಾರೆ. ಶಾಸಕಾಂಗ ಪಕ್ಷದ ಸಭೆಯನ್ನು ಕರೆದರೆ 117 ಶಾಸಕರ ಎದುರು ಸಮಸ್ಯೆ ಹೇಳಿಕೊಳ್ಳಲು ಧೈರ್ಯ ಇರುತ್ತೆ.
ಹಲವು ಶಾಸಕರು ಸಿಎಂ ಭೇಟಿಗಾಗಿ ಅವರ ಮನೆಗೆ ತೆರಳಿದ್ರು, ಸಿಎಂ ರೆಸ್ಟ್ ನಲ್ಲಿದ್ದಾರೆ ಎಂದು ಶಾಸಕರನ್ನು ವಾಪಾಸ್ ಕಳುಹಿಸಿದ್ದಾರೆ. ಸಿಎಂ ಅನಾರೋಗ್ಯದ ಕಾರಣ ಭೇಟಿಗೆ ಅವಕಾಶ ನೀಡುತ್ತಿಲ್ಲ. ಕಳೆದ ಆರು ತಿಂಗಳಿಂದ ಸಿಎಂ ಬಿಎಸ್ ವೈ ಭೇಟಿಯನ್ನು ನಿಲ್ಲಿಸಿದ್ದೇನೆ. ಆರು ತಿಂಗಳಿಂದ ಸಿಎಂ ಯಡಿಯೂರಪ್ಪರ ಕಚೇರಿಗೆ ಕಾಲಿಟ್ಟಿಲ್ಲ. ಸಿಎಂ ಗೃಹಕಚೇರಿಗೆ ಹೋಗಿಯೇ ಇಲ್ಲವೆಂದು ಶಾಸಕ ಯತ್ನಾಳ್ ಹೇಳಿದ್ದಾರೆ.
ಜನವರಿ ೪,೫ ರಂದು ನಡೆಯುವ ಸಭೆಗೆ ನಾನು ಹೋಗುತ್ತೇನೆ. ಅಲ್ಲಿಯೂ ಶಾಸಕಾಂಗ ಸಭೆ ಕರೆಯುವಂತೆ ಆಗ್ರಹಿಸುತ್ತೇನೆ. ಸಿಎಂ ಬಿಎಸ್ ವೈ ಕಾರ್ಯವೈಖರಿ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ರಾಜ್ಯ ಉಸ್ತುವಾರಿ, ರಾಜ್ಯಾಧ್ಯಕ್ಷರ ಮಂದೆಯು ಪ್ರಸ್ತಾಪಿಸುತ್ತೇನೆ. ಅನುಮತಿ ನೀಡಿದ್ರೆ ಬಿಜೆಪಿ ರಾಷ್ಟೀಯ ಅಧ್ಯಕ್ಷರ ಮುಂದೆಯೂ ಪ್ರಸ್ತಾಪಿಸುತ್ತೇನೆ ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.