ಕೋವಿಡ್ ಕಾಲದಲ್ಲಿ ಬಡವರಿಗೆ ನೆರವಾದ ಅನ್ನದಾತ; ರೈಸ್ ಎಟಿಎಂ ತೆರೆದು ಸಾವಿರಾರು ಜನರಿಗೆ ಸಹಾಯ ಹಸ್ತ

ಹೈದಾರಾಬಾದ್: ಬಹುತೇಕ ಜನರಿಗೆ ಆಸ್ತಿಪಾಸ್ತಿ ಸಂಪಾದಿಸಿ ತನ್ನ ಕುಟುಂಬದೊಂದಿಗೆ ಸುಖವಾದ ಜೀವನ ಸಾಗಿಸಬೇಕು ಎಂಬ ಕನಸಿರುತ್ತದೆ. ಹೀಗಾಗಿ ಬಡವರು, ಅಸಾಹಯಕರಿಗೆ ಸಹಾಯ ಮಾಡುವುದೆಂದರೆ ದೂರದ ಮಾತು. ಆದರೆ ಇಲ್ಲೊಬ್ಬ ವ್ಯಕ್ತಿ ಈ ಮಾತಿಗೆ ಅಪವಾದವಾಗಿದ್ದಾನೆ.…

ramu-started-rice-atm

ಹೈದಾರಾಬಾದ್: ಬಹುತೇಕ ಜನರಿಗೆ ಆಸ್ತಿಪಾಸ್ತಿ ಸಂಪಾದಿಸಿ ತನ್ನ ಕುಟುಂಬದೊಂದಿಗೆ ಸುಖವಾದ ಜೀವನ ಸಾಗಿಸಬೇಕು ಎಂಬ ಕನಸಿರುತ್ತದೆ. ಹೀಗಾಗಿ ಬಡವರು, ಅಸಾಹಯಕರಿಗೆ ಸಹಾಯ ಮಾಡುವುದೆಂದರೆ ದೂರದ ಮಾತು. ಆದರೆ ಇಲ್ಲೊಬ್ಬ ವ್ಯಕ್ತಿ ಈ ಮಾತಿಗೆ ಅಪವಾದವಾಗಿದ್ದಾನೆ. ಕೋವಿಡ್ ಸಂಕಷ್ಟ ಕಾಲದಲ್ಲಿ ರೈಸ್ ಎಟಿಎಂ ಆರಂಭಿಸಿ ಸಾವಿರಾರು ಜನರ ಹಸಿವು ನೀಗಿಸಿದ್ದು, ಸಮಾಜಕ್ಕೆ ಮಾದರಿಯಾಗಿದ್ದಾನೆ.

ಸಂಸ್ಥೆಯೊಂದರಲ್ಲಿ ಎಚ್‍ಆರ್ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ ದೊಸಪತಿ ರಾಮು ಕರೋನಾದಂತಹ ಕಷ್ಟ ಕಾಲದಲ್ಲಿ ಜನರ ಸಂಕಷ್ಟಕ್ಕೆ ಮಿಡಿದಿದ್ದಾನೆ. ದೊಸಪತಿ ರಾಮು ಅವರಿಗೂ ಎಲ್ಲರಂತೆ ದೊಡ್ಡ ಅಪಾಟ್ಮೆರ್ಂಟ್ ಖರೀದಿಸಿ ಹೆಂಟತಿ ಹಾಗೂ ತನ್ನ ಇಬ್ಬರು ಮಕ್ಕಳೊಂದಿಗೆ ಸುಖವಾದ ಜೀವನ ನಡೆಬೇಕು ಎಂದು ಕನಸಿತ್ತು. ಆದರೆ ರಾಮು ಆ ಆಸೆಗಳನ್ನು ದೂರ ಮಾಡಿ ಕರೋನಾ ಕಾಲದಲ್ಲಿ ಬಡವರಿಗೆ ನೆರವಾಗಲು ರೈಸ್ ಎಟಿಎಂ ಆರಂಭಿಸಿದರು.

ದೊಸಪತಿ ರಾಮು ತಮ್ಮ ಪಿಎಫ್ ಖಾತೆಯಿಂದ ಸ್ವಲ್ಪ ಹಣ, ಕ್ರೆಡಿಟ್ ಕಾರ್ಡ್ ನಿಂದ ಹಣ, ಜಮೀನು ಮಾರಿದ ಹಣವನ್ನು ರೈಸ್ ಎಟಿಎಂ ಆರಂಭಿಸಲು ಬಳಸಿಕೊಂಡರು. ದೇಶದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ ಸಂದರ್ಭದಲ್ಲಿ ರೈಸ್ ಎಟಿಎಂ ಆರಂಭಿಸಿದ್ದು, ಡಿ.19ಕ್ಕೆ 250 ದಿನ ಪೂರೈಸಿದೆ. ಸದ್ಯ ರಾಮು ಅವರ ಈ ಕಾರ್ಯ ದೇಶದ ಗಮನ ಸೆಳೆದಿದೆ.

Vijayaprabha Mobile App free

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.